ಗೋಣಿಕೊಪ್ಪ ವರದಿ, ಅ. 15: ಕಾವೇರಿ ಕಲಾ ವೇದಿಕೆಯಲ್ಲಿ ಕಾವೇರಿ ದಸರಾ ಸಮಿತಿ ವತಿಯಿಂದ ಆಯೋಜಿಸಿದ್ದ ಮಕ್ಕಳ ದಸರಾ ಕಾರ್ಯಕ್ರಮದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ತ್ಯಾಜ್ಯ ನಿರ್ವಹಣೆ ಕುರಿತು ಗೋಣಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ರೀನಾ ಪ್ರದರ್ಶನಕ್ಕೆ ಇಟ್ಟಿದ್ದ ವಿಜ್ಞಾನ ಅವಿಷ್ಕಾರ ಮೊದಲ ಸ್ಥಾನ ಗಿಟ್ಟಿಸಿಕೊಂಡಿತು. ಪೊನ್ನಂಪೇಟೆ ಸಂತ ಅಂಥೋನಿಯ ನವ್ಯ ದೇಚಮ್ಮ ಅನಾವರಣಗೊಳಿಸಿದ ವಾಟರ್ ಅಲರಮ್ ದ್ವಿತೀಯ, ಮೋದಿ ಚಿಂತನೆಯ ಸಿಟಿ ಅನಾವರಣಗೊಳಿಸಿದ ಕಳತ್ಮಾಡು ಲಯನ್ಸ್‍ನ ತರುಣ್ ತಿಮ್ಮಯ್ಯ ತೃತೀಯ ಸ್ಥಾನ ಪಡೆದರು.

ಚಿತ್ರಕಲೆ : 1-4 ತರಗತಿ ವಿಭಾಗದಲ್ಲಿ ಪೊನ್ನಂಪೇಟೆ ಸರ್ಕಾರಿ ಮಾದರಿ ಶಾಲೆಯ ಪಿ.ಬಿ. ಜೀವನ್ (ಪ್ರ), ಸರ್ವಧೈವತಾ ಶಾಲೆಯ ಟಿ. ಎ. ಸಾಕ್ಷಿತ್ (ದ್ವಿ), ಸಂತ ಅಂಥೋನಿಯ ಸ್ವಸ್ತಿಕ್ ಶೆಟ್ಟಿ (ತೃ), 5-7 ತರಗತಿ ವಿಭಾಗದಲ್ಲಿ ಸರ್ವಧೈವತಾ ಶಾಲೆಯ ಪಿ. ವಿ. ವಿಬಿನ್ (ಪ್ರ), ಸಂತ ಅಂಥೋನಿಯ ಶ್ರವಣ್ ಸುನಿಲ್ (ದ್ವಿ), ಸಂತ ಅಂಥೋನಿಯ ದಿಯಾ ದೇಚಮ್ಮ (ತೃ), 8-10 ನೇ ತರಗತಿ ವಿಭಾಗದಲ್ಲಿ ಸಂತ ಅಂತೋಣಿಯ ಸಿ. ಎಂ ಸಾಂಚ್ (ಪ್ರ), ಸಂತ ಅಂತೋನಿಯ ಪಿ. ಕೆ. ನಿಧಿ (ದ್ವಿ), ಸರ್ವಧೈವತಾ ಶಾಲೆಯ ಶೀಜಾ ಫಾತಿಮಾ (ತೃ), ಸಂತ ಅನ್ನಮ್ಮ ಶಾಲೆಯ ಅಲೋಷ್ಯಾ ಲೋನ 4 ನೇ ಸ್ಥಾನ ಪಡೆದರು.

ಮಕ್ಕಳ ಲೋಕ ಸೃಷ್ಟಿ : ಮಕ್ಕಳ ಸಂತೆ, ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಚಿತ್ರಕಲೆ ವಿಭಾಗದಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು. ವಿಜ್ಞಾನ ವಸ್ತು ಪ್ರದರ್ಶನದಲ್ಲಿ ತಮ್ಮದೇ ಆದ ಚಿಂತನೆ ಅನಾವರಣಗೊಂಡಿತು. ಮಕ್ಕಳ ಸಂತೆಯಲ್ಲಿ ಎಲ್ಲೆಲ್ಲೂ ಮಕ್ಕಳದೇ ಕೂಗು.. ಬನ್ನಿ.. ಬನ್ನಿ ಎಂದು ಗ್ರಾಹಕರನ್ನು ತಮ್ಮತ್ತ ಸೆಳೆಯುವ ಮೂಲಕ ಮಾರುಕಟ್ಟೆ ಆವರಣದ ಅನುಭವ ನೀಡಿದರು. ಆದರೆ, ಗ್ರಾಹಕರ ಸಂಖ್ಯೆ ಮಾತ್ರ ತೀರ ವಿರಳವಾಯಿತು. ಸಂತೆಯಲ್ಲಿ ಹೆಚ್ಚಾಗಿ ಸರ್ಕಾರಿ ಶಾಲೆಯ ಮಕ್ಕಳು ಪಾಲ್ಗೊಂಡರು. ಹಣ್ಣು ತರಕಾರಿಗಳು ಹೆಚ್ಚಾಗಿ ಕಂಡು ಬಂದವು. ಅಲಂಕಾರಕ್ಕೆ ಬಳಸುವ ವಸ್ತುಗಳು, ಆಹಾರ, ತಿಂಡಿಗಳು, ಎಳನೀರು, ಸೋಡ ಕೂಡ ಮಾರಾಟಕಿಟ್ಟಿದ್ದರು.

ಚಿತ್ರಕಲೆ ವಿಭಾಗದಲ್ಲಿ ಸುಮಾರು 75 ವಿದ್ಯಾರ್ಥಿಗಳು ಪಾಲ್ಗೊಂಡರು. ಕಿರಿಯರ ಸಂಖ್ಯೆಯಲ್ಲಿ ಹೆಚ್ಚಾಗಿ ಕಂಡು ಬಂತು.1-4 ನೇ ತರಗತಿವರೆಗೆ ಸೂರ್ಯೋದಯ, 5-7 ವರೆಗೆ ನಿಸರ್ಗ ಚಿತ್ರಣ, 8-10 ರವರೆಗೆ ದಸರಾ ದೃಶ್ಯ ಸ್ಪರ್ಧೆ ನಡೆಯಿತು. ಕಾರ್ಯಕ್ರಮವನ್ನು ಹಿರಿಯ ವರ್ತಕ ಅಜಿತ್ ಅಯ್ಯಪ್ಪ, ಸ್ಥಳೀಯ ಗ್ರಾ. ಪಂ ಅಧ್ಯಕ್ಷೆ ಸೆಲ್ವಿ, ಕಾವೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಬಿ.ಎನ್. ಪ್ರಕಾಶ್ ಉದ್ಘಾಟಿಸಿದರು. ಈ ಸಂದರ್ಭ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಪ್ರ. ಕಾರ್ಯದರ್ಶಿ ಚೇಂದೀರ ಪ್ರಬಾವತಿ, ಕಾರ್ಯಕ್ರಮ ಸಂಚಾಲಕ ತಿರುನೆಲ್ಲಿಮಾಡ ಜೀವನ್, ಸದಾನಂದ ಪುರೋಹಿತ ಉಪಸ್ಥಿತರಿದ್ದರು. ವರದಿ - ಸುದ್ದಿಪುತ್ರ