ಮಡಿಕೇರಿ, ಅ. 10: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವಕ್ಕೆ ಇಂದು ಸಾಂಪ್ರದಾಯಿಕ ಕರಗ ಉತ್ಸವದ ಮೂಲಕ ಚಾಲನೆ ನೀಡಲಾಯಿತು. ನಗರದ ಪಂಪಿನ ಕೆರೆಯಲ್ಲಿ ಸಂಪ್ರದಾಯದಂತೆ ನಾಲ್ಕು ಶಕ್ತಿ ದೇವತೆಗಳ ಕರಗಗಳಿಗೆ ಪೂಜೆ ಸಲ್ಲಿಸುವ ಮೂಲಕ ಕರಗ ಪ್ರದಕ್ಷಿಣೆ ಪ್ರಾರಂಭವಾಯಿತು. ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಕರಗವನ್ನು ಧರ್ಮ,ದಂಡಿನ ಮಾರಿಯಮ್ಮ ದೇವಾಲಯದ ಕರಗವನ್ನು ಉಮೇಶ್, ಕೋಟೆ ಮಾರಿಯಮ್ಮ ದೇವಾಲಯ ಕರಗವನ್ನು ಅನೀಶ್ ಕುಮಾರ್,ಕಂಚಿಕಾಮಾಕ್ಷಿ ದೇವಾಲಯದ ಕರಗವನ್ನು ನವೀನ್ ಹೊತ್ತಿದ್ದರು. ವಾದ್ಯಗೋಷ್ಠಿಯೊಂದಿಗೆ ಕರಗಗಳು ಬನ್ನಿ ಮಂಟಪ ಚೌಡೇಶ್ವರಿ ದೇವಾಲಯ ಕೋದಂಡ ರಾಮ ದೇವಾಲಯ ಹಾಗೂ ಪೇಟೆ ರಾಮ ಮಂದಿರ (ಮೊದಲ ಪುಟದಿಂದ) ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ತಮ್ಮ ತಮ್ಮ ದೇವಾಲಯಗಳಿಗೆ ಹಿಂತಿರುಗಿದವು.ಕರಗ ಪೂಜೆ ಸಂದರ್ಭ ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ಶ್ರೀವಿದ್ಯಾ, ದಸರಾ ಸಮಿತಿ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಉಪಾಧ್ಯಕ್ಷ ಟಿ.ಎಸ್.ಪ್ರಕಾಶ್ ಕಾರ್ಯಾಧ್ಯಕ್ಷ ಮಹೇಶ್ ಜೈನಿ, ಪ್ರಧಾನ ಕಾರ್ಯದರ್ಶಿ ಚುಮ್ಮಿ ದೇವಯ್ಯ, ಖಜಾಂಚಿ ಅನಿತಾ ಪೂವಯ್ಯ, ದಶಮಂಟಪ ಸಮಿತಿ ಅಧ್ಯಕ್ಷ ರವಿ ಕುಮಾರ್, ನಗರಸಭಾ ಆಯುಕ್ತ ರಮೇಶ್, ಡಿವೈಎಸ್ಪಿ ಸುಂದರರಾಜ್, ನಗರಸಭಾ ಸದಸ್ಯರು, ದಸರಾ ಸಮಿತಿ ಸದಸ್ಯರುಗಳು ಇದ್ದರು.