ಮಡಿಕೇರಿ, ಅ. 10: ಈಚೆಗೆ ಜಿಲ್ಲೆಯಲ್ಲಿ ಸಂಭವಿಸಿರುವ ಪ್ರಾಕೃತಿಕ ವಿಕೋಪ ಸಂಬಂಧ ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಅಧ್ಯಕ್ಷ ಎನ್.ಯು. ನಾಚಪ್ಪ ನೇತೃತ್ವದಲ್ಲಿ ಇಂದು ಇಲ್ಲಿನ ಗಾಂಧಿ ಮಂಟಪ ಎಂದುರು ಅಹೋರಾತ್ರಿ ಧರಣಿ ನಡೆಸಲಾಗುತ್ತಿದೆ.
ಪ್ರಾಕೃತಿಕ ವಿಕೋಪಕ್ಕೆ ಹಾರಂಗಿ ಜಲಾಶಯ ಕಾರಣವೆಂದು ಆರೋಪಿಸಿರುವ ನಾಚಪ್ಪ, ಜಲಾಶಯ ವನ್ನು ತುರ್ತಾಗಿ ಕೆಡವಬೇಕೆಂದು ಆಗ್ರಹಿಸಿದ್ದಾರೆ. ಅಲ್ಲದೆ ಪ್ರಾಕೃತಿಕ ಹಾನಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವದು, ಸರಕಾರ ಸಂಗ್ರಹಿಸಿರುವ ಹಣ ಸಹಿತ ದಾನಿಗಳ ನೆರವಿನ ಕುರಿತು ಶ್ವೇತಪತ್ರ ಹೊರಡಿಸುವದು, ಸಂತ್ರಸ್ತರಿಗೆ ಪುನರ್ವಸತಿ ಕುರಿತು ನೀಲಿನಕ್ಷೆ ಯೊಂದಿಗೆ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ತಾ. 11ರ ಬೆಳಿಗ್ಗೆ 10 ಗಂಟೆಯ ತನಕ ಸತ್ಯಾಗ್ರಹ ಮುಂದುವರಿಯಲಿದೆ ಎಂದು ಅವರು ಆಗ್ರಹಿಸಿದ್ದಾರೆ.
ಇಂದಿನ ಧರಣಿಯಲ್ಲಿ ಸಂಘಟನೆಯ ಪ್ರಮುಖರೊಂದಿಗೆ ಸೂರ್ಲಬ್ಬಿ, ಮುಕ್ಕೋಡ್ಲು ಇತರೆಡೆಗಳ ಏಳುನಾಡು ಸೀಮೆಯ ಗ್ರಾಮಸ್ಥರು ಭಾಗವಹಿಸಿದ್ದಾರೆ.