ಸುಂಟಿಕೊಪ್ಪ, ಅ. 11: ಕಾನ್‍ಬೈಚನಹಳ್ಳಿ ಅಂಚೆ ಕಚೇರಿ ಸಮೀಪ ನೂತ ನವಾಗಿ ನಿರ್ಮಿಸಲಾಗುವ ಅಂಗನವಾಡಿ ಕಟ್ಟಡಕ್ಕೆ ಭೂಮಿಪೂಜೆಯನ್ನು ನಾಕೂರು-ಶಿರಂಗಾಲ ಗ್ರಾ.ಪಂ. ಅಧ್ಯಕ್ಷೆ ವಿ.ಆರ್. ರಂಜಿನಿ ನೆರವೇರಿಸಿದರು. ಈ ಸಂದರ್ಭ ಸದಸ್ಯ ಅಂಬೆಕಲ್ ಚಂದ್ರು ಮಾತನಾಡಿ, ಹಲವಾರು ವರ್ಷಗಳಿಂದ ಈ ಭಾಗದ ಪುಟ್ಟ ಮಕ್ಕಳಿಗೆ ಅಂಗನವಾಡಿ ಇಲ್ಲದೆ ಬಾಡಿಗೆ ಕೊಠಡಿಯೊಂದರಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಇದೀಗ ಉದ್ಯೋಗ ಖಾತ್ರಿ ಯೋಜನೆಯಡಿ ರೂ. 8 ಲಕ್ಷ 80 ಸಾವಿರ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲಾಗುವದು ಎಂದರು. ಮೊಳೂರು ಸತೀಶ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಗುಳ್ಳಪ್ಪ, ಅಂಗನವಾಡಿ ಕಾರ್ಯಕರ್ತೆ ಶುಭ, ಇಂಜಿನಿಯರ್ ಪ್ರತೀಕ್, ಗ್ರಾಮಸ್ಥರು ಹಾಜರಿದ್ದರು.