ಮಡಿಕೇರಿ, ಅ. 10: ಮಡಿಕೇರಿ ಕರವಲೆ ಭಗವತಿ ಮಹಿಷ ಮರ್ದಿನಿ ದೇವಾಲಯ ದಸರಾ ಮಂಟಪ ಸಮಿತಿ 23ನೇ ವರ್ಷದ ದಸರಾ ಉತ್ಸವ ಆಚರಣೆಗೆ ಸಜ್ಜಾಗುತ್ತಿದೆ ಎಂದು ಕರವಲೆ ಭಗವತಿ ಮಹಿಷ ಮರ್ದಿನಿ ದೇವಾಲಯ ದಸರಾ ಮಂಟಪ ಸಮಿತಿ ಅಧ್ಯಕ್ಷ ಅರೆಯಂಡ ಪ್ರಸನ್ನ ಪಳಂಗಪ್ಪ ತಿಳಿಸಿದ್ದಾರೆ.
ಎರಡು ಟ್ರ್ಯಾಕ್ಟರ್‍ಗಳನ್ನು ಬಳಸಲಾಗುತ್ತಿದ್ದು, ಶ್ರೀ ದೇವಿ ಮಹಾತ್ಮೆ ಕಥಾ ಸಾರಾಂಶದ ಸ್ತಬ್ಧ ಕಲಾಕೃತಿಗಳನ್ನು ಅಳವಡಿಸಲಾಗುತ್ತದೆ.
7 ಕಲಾಕೃತಿಗಳನ್ನು ಸ್ಥಳೀಯ ಕಲಾವಿದರೆ ತಯಾರು ಮಾಡಲಿದ್ದಾರೆ. ಪ್ಲಾಟ್ ಫಾರಂ ನಿರ್ಮಾಣ ಟ್ರ್ಯಾಕ್ಟರ್ ಸೆಟ್ಟಿಂಗ್ಸ್‍ನ್ನು ಮಣಿ ಮತ್ತು ತಂಡದವರು ಮಾಡಲಿದ್ದಾರೆ.
ಲೈಟಿಂಗ್ ಬೋರ್ಡ್, ಧ್ವನಿವರ್ಧಕ ಹಾಗೂ ಸ್ಟುಡಿಯೋ ಸೆಟ್ಟಿಂಗ್ಸ್‍ನ್ನು ಮಡಿಕೇರಿ ಫ್ಯೂಚರ್ ಪವರ್ಸ್ ಎಎಲ್‍ಸಿ ಗ್ರೂಪ್‍ನ ಲೋಕೇಶ್ ಒದಗಿಸಲಿದ್ದಾರೆ.
ರೂ. 5 ಲಕ್ಷ ವೆಚ್ಚದಲ್ಲಿ ಮಂಟಪ ವನ್ನು ಹೊರ ತರಲಾಗುತ್ತಿದ್ದು, ಕಕ್ಕಬೆಯ ವಾಲಗ ಮಂಟಪವನ್ನು ಮುನ್ನಡೆ ಸಲಿದೆ.. ಸಾಂಪ್ರದಾಯಿಕ ಆಚರಣೆಗೆ ಒತ್ತು ನೀಡಲಾಗುತ್ತದೆ ಎಂದು ಪ್ರಸನ್ನ ಪಳಂಗಪ್ಪ ಮಾಹಿತಿಯಿತ್ತರು.
- ಉಜ್ವಲ್ ರಂಜಿತ್