*ಗೋಣಿಕೊಪ್ಪ, ಅ. 8: ಖಾಸಗಿ ಬಸ್ ಸಾಕಾನೆಗೆ ಡಿಕ್ಕಿ ಹೊಡೆದ ಪರಿಣಾಮ ಆನೆಯ ಸೊಂಟ ಮುರಿದು ಸಾವನ್ನಪ್ಪಿದ ಘಟನೆ ನಾಗರಹೊಳೆ ಅಭಯಾರಣ್ಯದ ಮತ್ತಿಗೋಡು ಆನೆ ಶಿಬಿರದಲ್ಲಿ ನಡೆದಿದೆ. ಕೇರಳದ ಖಾಸಗಿ ಬಸ್ಸೊಂದು ಕಣ್ಣೂರಿನಿಂದ ಬೆಂಗಳೂರಿಗೆ ಗೋಣಿಕೊಪ್ಪ, ತಿತಿಮತಿ, ಮೈಸೂರು ಮಾರ್ಗದಲ್ಲಿ ತೆರಳುತ್ತಿದ್ದಾಗ ರಸ್ತೆಯ *ಗೋಣಿಕೊಪ್ಪ, ಅ. 8: ಖಾಸಗಿ ಬಸ್ ಸಾಕಾನೆಗೆ ಡಿಕ್ಕಿ ಹೊಡೆದ ಪರಿಣಾಮ ಆನೆಯ ಸೊಂಟ ಮುರಿದು ಸಾವನ್ನಪ್ಪಿದ ಘಟನೆ ನಾಗರಹೊಳೆ ಅಭಯಾರಣ್ಯದ ಮತ್ತಿಗೋಡು ಆನೆ ಶಿಬಿರದಲ್ಲಿ ನಡೆದಿದೆ. ಕೇರಳದ ಖಾಸಗಿ ಬಸ್ಸೊಂದು ಕಣ್ಣೂರಿನಿಂದ ಬೆಂಗಳೂರಿಗೆ ಗೋಣಿಕೊಪ್ಪ, ತಿತಿಮತಿ, ಮೈಸೂರು ಮಾರ್ಗದಲ್ಲಿ ತೆರಳುತ್ತಿದ್ದಾಗ ರಸ್ತೆಯ (ಮೊದಲ ಪುಟದಿಂದ) ಮೈಸೂರಿನ ವಿಶ್ವವಿಖ್ಯಾತ ದಸರಾ ಉತ್ಸವದಲ್ಲಿ ಅಂಬಾರಿ ಹೊತ್ತಿದ್ದ ರಂಗ ಇದೀಗ ಪ್ರಾಣಬಿಟ್ಟು ನಿರಾಸೆ ಉಂಟುಮಾಡಿದ್ದಾನೆ.ದಷ್ಟ ಪುಷ್ಟವಾಗಿ ಆರೋಗ್ಯವಂತನಾಗಿದ್ದ. ನಾಯಕತ್ವದ ಗುಣಗಳನ್ನು ಹೊಂದಿದ್ದ ರಂಗ, ಕಾವಡಿ, ಮಾವುತರ ಆಜ್ಞೆಗಳನ್ನು ಪಾಲಿಸುತ್ತಿದ್ದ. ಭಾನುವಾರ ತನ್ನ ನಿತ್ಯ ದಿನಚರಿಯಂತೆ ಮುಂಜಾನೆ 3 ಘಂಟೆಗೆ ಆಹಾರ ಅರಸಿ ಕಾಡಿನಲ್ಲಿ ಸುತ್ತಾಡಿಕೊಂಡು ಬಂದ ರಂಗ ಶಿಬಿರದಿಂದ ಮುಖ್ಯ ರಸ್ತೆಯ ಮತ್ತೊಂದು ಬದಿಯಲ್ಲಿದ್ದ ಅರಣ್ಯಕ್ಕೆ ಹೋಗುತ್ತಿದ್ದ ಸಂದರ್ಭ ತಿತಿಮತಿ ಮಾರ್ಗದಿಂದ ಬಂದ ಕೇರಳದ ಕಲ್ಪಕ ಖಾಸಗಿ ಬಸ್ ಡಿಕ್ಕಿಯಾಗಿ 4 ಘಂಟೆಗಳ ಕಾಲ ನರಳಿ ನರಳಿ ಮೃತಪಟ್ಟಿದ್ದಾನೆ. ವೈದ್ಯಾಧಿಕಾರಿ ಮುಜೀಬ್ ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ. ಸ್ಳಳಕ್ಕೆ ಮೈಸೂರು ವನ್ಯಜೀವಿ ವಿಭಾಗದ ಡಿ.ಸಿ.ಎಫ್. ಹನುಮಂತಪ್ಪ , ಎ.ಸಿ.ಎಫ್. ಪ್ರಸನ್ನ ಕುಮಾರ್, ಪ್ರಬಾರ ಆರ್.ಎಫ್.ಒ. ಸುರೇಂದ್ರ, ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಸ್ ಚಾಲಕ ಇಸ್ಮಾಯಿಲ್ ನಾಲಕತ್ ಎಂಬಾತನ ವಿರುದ್ಧ ವನ್ಯಜೀವಿ ಕಾಯ್ದೆಯಡಿ ದೂರು ದಾಖಲಾಗಿದೆ. ಮೃತಪಟ್ಟ ರಂಗನನ್ನು ನೋಡಲು ಸ್ಥಳೀಯ ಗ್ರಾಮದ ನಿವಾಸಿಗಳು ತಂಡೋಪತಂಡವಾಗಿ ಬಂದರು. ನೆರೆದ ಜನರನ್ನು ನಿಯಂತ್ರಿಸಲು ಪೊನ್ನಂಪೇಟೆ ಠಾಣೆಯ ಉಪನಿರೀಕ್ಷಕ ಮಹೇಶ್ ಹಾಗೂ ಸಿಬ್ಬಂದಿಗಳು ಪ್ರಯತ್ನಿಸಿದರು.

- ಎನ್.ಎನ್. ದಿನೇಶ್/ ಸುದ್ದಿಪುತ್ರ