ಮಡಿಕೇರಿ, ಅ. 8: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿಗೆ ಈ ಬಾರಿಯ ನ್ಯಾಕ್ ಮಾನ್ಯತೆಯಲ್ಲಿ ಃ+ ಗ್ರೇಡ್ ಲಭಿಸಿದ್ದು, ಮಾನ್ಯತೆಯಲ್ಲಿ ಹಿನ್ನಡೆ ಅನುಭವಿಸಿದೆ. 2006ನೇ ಇಸವಿಯಲ್ಲಿ ಃ++ (2.97) ಹಾಗೂ 2012ರಲ್ಲಿ ಂ (3.25) ಗ್ರೇಡ್ ಲಭಿಸಿತ್ತು. 2012 ಇಸವಿಯಿಂದ ಈ ಕಾಲೇಜಿನಲ್ಲಿ ಯಾವದೇ ಅಭಿವೃದ್ಧಿ ಕಾರ್ಯಗಳು ನಡೆಯದೇ ಇರುವದರಿಂದ ಈ ಹಿನ್ನಡೆಗೆ ಕಾರಣವಾಗಿದೆ.