ಮಡಿಕೇರಿ, ಅ. 9: ಸುಮಾರು 750 ವರ್ಷಗಳ ಹಿಂದಿನ ಇತಿಹಾಸವಿರುವ ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ವರ್ಷಂಪ್ರತಿ ನಡೆಸುವ ಶ್ರೀ ದುರ್ಗಾ ಪೂಜೆ (ದುರ್ಗಾ ನಮಸ್ಕಾರ) ತಾ 10ರಿಂದ (ಇಂದಿನಿಂದ) 19ರವರೆಗೆ ಪ್ರತಿನಿತ್ಯ ರಾತ್ರಿ 7ಗಂಟೆಯಿಂದ ನಡೆಯಲಿದ್ದು ಊರಿನವರೊಂದಿಗೆ ಸಾರ್ವಜನಿಕರು ಪೂಜೆ ಮಾಡಿಸಬಹುದಾಗಿದೆ ಎಂದು ಊರಿನ ತಕ್ಕ ಮುಖ್ಯಸ್ಥರು ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚಮ್ಮಟೀರ ಡಿಕ್ಕಿ ಕುಶಾಲಪ್ಪ ತಿಳಿಸಿದ್ದಾರೆ.

10ರಿಂದ ರಾತ್ರಿ 7ಗಂಟೆಗೆ ಭದ್ರಕಾಳಿ ದೇವಸ್ಥಾನದಲ್ಲಿ ಪ್ರತಿನಿತ್ಯ ದುರ್ಗಾ ಪೂಜೆ ನಡೆಯಲಿದ್ದು ಪೂಜೆ ಮಾಡಿಸುವವರು ಸಂಜೆ 6ಗಂಟೆಯೊಳಗೆ ಪೂಜಾ ಸಾಮಾಗ್ರಿಗಳನ್ನು ತಲಪಿಸಬೇಕಿದೆ. 19ರಂದು ಬೆಳಿಗ್ಗೆ 7ಗಂಟೆಗೆ ಗಣಪತಿ ಪೂಜೆ ನಡೆಯಲಿದ್ದು, 11ಗಂಟೆಯಿಂದ ಸಾಮೂಹಿಕ ದುರ್ಗಾ ಪೂಜೆ ನಡೆಯಲಿದೆ. ಮದ್ಯಾಹ್ನ ಸಾಮೂಹಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ : 8105330211, 7353697975, ಅಥವಾ 9880967573 ಸಂಪರ್ಕಿಸಬಹುದಾಗಿದೆ.