ಮಡಿಕೇರಿ, ಅ 9: ನಗರದ ನಾಲ್ಕು ಶಕ್ತಿ ದೇವತೆಗಳಲ್ಲೊಂದಾದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿ 45ನೇ ವರ್ಷದ ಉತ್ಸವ ಆಚರಣೆಗೆ ಸಿದ್ಧತೆ ನಡೆಸುತ್ತಿದ್ದು, ಈ ಬಾರಿ ಶಿವ ಪುರಾಣದ ಕುಮಾರ ಕಾಂಡ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದೆ ಎಂದು ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿ ಅಧ್ಯಕ್ಷ ನವೀನ್ ಪೂಜಾರಿ ತಿಳಿಸಿದ್ದಾರೆ.

ಎರಡು ಟ್ರ್ಯಾಕ್ಟರ್‍ಗಳನ್ನು ಬಳಸಲಾಗುತ್ತಿದ್ದು, ದಿಂಡಿಕಲ್‍ನ ನ್ಯೂ ಮಾತಾ ಎಲೆಕ್ಟ್ರಿಕಲ್ಸ್‍ನವರು ಲೈಟಿಂಗ್ ಬೋರ್ಡ್ ಅಳವಡಿಸಲಿದ್ದಾರೆ. ಫ್ಲಾಟ್ ಫಾರಂನ್ನು ಪದ್ದು ಮತ್ತು ಗಜ್ಜು ತಂಡ ನಿರ್ಮಿಸಲಿದ್ದು, ಧ್ವನಿವರ್ಧಕ ಹಾಗೂ ಸ್ಟುಡಿಯೋ ಸೆಟ್ಟಿಂಗ್ಸ್ ವ್ಯವಸ್ಥೆಯನ್ನು ಮಡಿಕೇರಿಯ ಸತ್ಯ ಪ್ರೊ ಸೌಂಡ್ಸ್‍ನ ಅವಿನ್‍ಕುಮಾರ್ ಮಾಡಲಿದ್ದಾರೆ. 5 ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಸ್ಥಳೀಯ ಕಲಾವಿದರೆ ಕಲಾಕೃತಿಗಳನ್ನು ತಯಾರಿಸಲಿದ್ದಾರೆ. ಕಲಾಕೃತಿಗಳಿಗೆ ಚಲನ - ವಲನವನ್ನು ಮಡಿಕೇರಿಯ ದೀಕ್ಷಾ ಫ್ಯಾಬ್ರಿಕೇಟರ್ಸ್ ತಂಡ ನೀಡಲಿದೆ. ಟ್ರ್ಯಾಕ್ಟರ್ ಸೆಟ್ಟಿಂಗ್ಸ್‍ನ್ನು ಎಂ.ಬಿ. ಮಂಜು ಮತ್ತು ತಂಡ ಮಾಡಲಿದ್ದು, ರೂ. 6 ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರ ತರಲಾಗುತ್ತಿದೆ ವಿಗ್ರಹ ಅಲಂಕಾರವನ್ನು ಪಿ.ಎಂ. ಖಾದರ್ ಮಾಡಲಿದ್ದಾರೆ ಎಂದು ನವೀನ್ ಪೂಜಾರಿ ತಿಳಿಸಿದ್ದಾರೆ. - ಉಜ್ವಲ್ ರಂಜಿತ್