ಸುಂಟಿಕೊಪ್ಪ, ಅ. 9: ಮಾದಾಪುರ ರಸ್ತೆಯಲ್ಲಿರುವ ಶ್ರೀ ವೃಕ್ಷೋದ್ಭವ ಶಕ್ತಿ ಗಣಪತಿ ದೇವಾಲಯದಲ್ಲಿ ಶರನ್ನವರಾತ್ರಿ ವಿಶೇಷ ಪೂಜೆಯನ್ನು ತಾ.10 ರಿಂದ 19 ರವರೆಗೆ ನಡೆಸಲಾಗುತ್ತಿದೆ.

ತಾ. 10 ರಂದು (ಇಂದು) ಕುಂಕುಮ ಅಲಂಕಾರ, 11 ರಂದು ಅರಸಿನ ಅಲಂಕಾರ, 12 ರಂದು ಗಂಧದ ಅಲಂಕಾರ, 13 ರಂದು ಬೆಣ್ಣೆ ಅಲಂಕಾರ, 14 ರಂದು ವಸ್ತ್ರಾಲಂಕಾರ, 15 ರಂದು ದಾಳಿಂಬೆ ಅಲಂಕಾರ, 16 ರಂದು ದ್ರಾಕ್ಷಿ ಅಲಂಕಾರ, 17 ರಂದು ವೀಳ್ಯದೆಲೆ ಅಲಂಕಾರ, 18 ರಂದು ಪುಷ್ಪ ಅಲಂಕಾರ, 19 ರಂದು ನವದಾನ್ಯ ಅಲಂಕಾರ ಹಾಗೂ ಪಂಚಾಮೃತ ಅಭಿಷೇಕ ಪೂಜೆಯನ್ನು ಏರ್ಪಡಿಸಲಾಗಿದ್ದು ಭಕ್ತಾದಿಗಳು ಭಾಗವಹಿಸಿ ದೇವರ ಕೃಪೆಗೆ ಪಾತ್ರವಾಗಬೇಕೆಂದು ದೇವಸ್ಥಾನ ಟ್ರಸ್ಟ್ ಮಂಡಳಿ ಹಾಗೂ ಉತ್ಸವ ಸಮಿತಿ ಪ್ರಕಟಣೆ ತಿಳಿಸಿದೆ.