ನಾಪೆÇೀಕ್ಲು, ಅ. 9: ಸಮೀಪದ ಅಂಕುರ್ ಪಬ್ಲಿಕ್ ಶಾಲೆಯು ಈ ಬಾರಿಯ ಗಾಂಧಿ ಜಯಂತಿಯನ್ನು ವಿನೂತನವಾಗಿ ‘ತನಲ್ ಕೂರ್ಗ್’ (ನೆರಳಿನ ಮನೆ) ವೃದ್ಧಾಶ್ರಮದಲ್ಲಿ ಆಚರಿಸಿತು.
ವೃದ್ಧಾಶ್ರಮದ ವೃದ್ಧರಿಗೆ ಮನರಂಜನೆ ನೀಡುವ ಉದ್ದೇಶದಿಂದ ವಿದ್ಯಾರ್ಥಿಗಳು ನೃತ್ಯ, ನಾಟಕಗಳ ಮೂಲಕ ಅವರನ್ನು ರಂಜಿಸಿದರು. ವಿದ್ಯಾರ್ಥಿಗಳು ತಾವೇ ಹಣ ಸಂಗ್ರಹಿಸಿ ಕಿರುಕಾಣಿಕೆಯನ್ನು, ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ಸೇವಾ ಮನೋಭಾವ ಪ್ರದರ್ಶಿಸಿದರು.
ಈ ಸಂದರ್ಭ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೇಟೋಳಿರ ರತ್ನಾ ಚರ್ಮಣ್ಣ, ಪ್ರಾಂಶುಪಾಲೆ ಆಶಾ ಬೋಪಣ್ಣ, ಶಿಕ್ಷಕ ವೃಂದ, ಇದ್ದರು.