ಚೆಟ್ಟಳ್ಳಿ, ಅ. 8: ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಮೈಸೂರಿನಲ್ಲಿ ನಡೆಸಿದ 64ನೇ ವನ್ಯಜೀವಿ ಸಪ್ತಾಹ-2018 ಕಾರ್ಯಕ್ರಮದಲ್ಲಿ ಕೊಡಗಿನ ಅಮ್ಮತ್ತಿಯ ಹವ್ಯಾಸಿ ಛಾಯಾಗ್ರಾಹಕ ಕುಂಞಂಡ ಮಾಚು ಮಾಚಯ್ಯ ಅವರಿಗೆ ಮೂರನೇ ಸ್ಥಾನ ನೀಡಲಾಗಿದೆ.
ಅಕ್ಟೋಬರ್ ತಿಂಗಳಲ್ಲಿ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ವನ್ಯಜೀವಿ ಸಪ್ತಾಹವನ್ನು ಆಚರಿಸು ತ್ತಿದ್ದು, ಈ ವರ್ಷ ಮೈಸೂರಿನ ಕಲಾಮಂದಿರದಲ್ಲಿ ಆಯೋಜಿಸಿದ್ದ 64ನೇ ವನ್ಯಜೀವಿ ಸಪ್ತಾಹ-2018ರಲ್ಲಿ ವನ್ಯಜೀವಿಗೆ ಸಂಬಂಧಿಸಿದ ಛಾಯಾಚಿತ್ರ ಪ್ರದÀರ್ಶನವನ್ನು ಏರ್ಪಡಿಸಲಾಗಿತ್ತು. ಒಬ್ಬ ಛಾಯಾಗ್ರಾಹಕನಿಗೆ 2 ವನ್ಯಜೀವಿಗೆ ಸಂಬಂಧಿಸಿದ ಛಾಯಾಚಿತ್ರವನ್ನು ಪ್ರದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಸುಮಾರು 100 ವನ್ಯಜೀವಿ ಛಾಯಾ ಗ್ರಾಹಕರು ಸಲ್ಲಿಸಿದ ವನ್ಯಜೀವಿ ಛಾಯಾಚಿತ್ರದಲ್ಲಿ 120 ವನ್ಯಜೀವಿ ಛಾಯಾಚಿತ್ರಗಳು ಪ್ರದರ್ಶನಕ್ಕೆ ಆಯ್ಕೆಗೊಂಡವು. ಹವ್ಯಾಸಿ ಛಾಯಾಗ್ರಾಹಕ ಕುಂಞಂಡ ಮಾಚು ಮಾಚಯ್ಯ ಅವರ ಹೆಜ್ಜೇನು ಗೂಡಿಗೆ ಗಿಡುಗನ ಧಾಳಿ ಹಾಗೂ ಕಬಿನಿಯಲ್ಲಿ ತÉಗೆದ ಮೂರು ಹುಲಿ ಮರಿಗಳು ಆಟವಾಡುವ ದೃಶ್ಯ 2 ವನ್ಯಜೀವಿ ಛಾಯಾಚಿತ್ರ ಪ್ರದರ್ಶನಕ್ಕೆ ಆಯ್ಕೆಗೊಂಡವು.
ಮಾಚಯ್ಯ ಅವರ ಹೆಜ್ಜೇನು ಗೂಡಿಗೆ ಗಿಡುಗನ ಧಾಳಿಯ ಛಾಯಾಚಿತ್ರ ಮೂರನೇ ಸ್ಥಾನಕ್ಕೆ ಆಯ್ಕೆಗೊಂಡಿದೆ. ತಾ. 5 ರಂದು ಮೈಸೂರಿನ ಕಲಾಮಂದಿರದಲ್ಲಿ ನಡೆದ 64ನೇ ವನ್ಯ ಜೀವಿ ಸಪ್ತಾಹ-2018 ಕಾರ್ಯಕ್ರಮದಲ್ಲಿ ಅರಣ್ಯ ಸಚಿವ ಆರ್. ಶಂಕರ್ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಅಮ್ಮತ್ತಿಯ ಹವ್ಯಾಸಿ ಛಾಯಾ ಗ್ರಾಹಕ ಕುಂಞಂಡ ಮಾಚು ಮಾಚಯ್ಯ ಅವರು ವನ್ಯಜೀವಿ ಹಾಗೂ ಹಲವು ಕ್ರೀಡೆಗಳಲ್ಲಿ ಹತ್ತು ಹಲವು ಅತ್ಯುತ್ತಮ ಛಾಯಾಚಿತ್ರಗಳನ್ನು ತೆಗೆದಿದ್ದು, ಮಲೇಶಿಯಾ ಹಾಗೂ ಗೋವಾದಲ್ಲಿ ನಡೆದ 2017 ರೈನ್ ಫಾರೆಸ್ಟ್ ಚಾಲೆಂಜ್ ರೋಮಾಂಚಕ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಸೌತ್ ಕೂರ್ಗ್ ಕ್ಲಬ್ ದಸರಾ ಹಬ್ಬದ ಪ್ರಯುಕ್ತ ಆಯೋಜಿಸಿರುವ ಆಟೋಕ್ರಾಸ್ ರ್ಯಾಲಿಯಲ್ಲಿ ತೆಗೆದ ಅತ್ಯುತ್ತಮ ಛಾಯಾಚಿತ್ರಕ್ಕೆ ಮೊದಲ ಬಹುಮಾನ, ಕೊಡಗು ಡಿಸ್ಟ್ರಿಕ್ಟ್ ಟೂರಿಸಂ ಡಿಪಾರ್ಟ್‍ಮೆಂಟ್ ಫೋಟೋಗ್ರಫಿಯಲ್ಲಿ ಮೊದಲ ಸ್ಥಾನ, 2016 ರಲ್ಲಿ ವನ್ಯಜೀವಿ ಸಪ್ತಾಹ ಅಂಗವಾಗಿ ಮೈಸೂರು ಮೃಗಾಲಯದಲ್ಲಿ ನಡೆದ ವನ್ಯಜೀವಿ ಛಾಯಾಚಿತ್ರ ಸ್ಪರ್ಧೆಯಲ್ಲಿ ಎರಡನೇ ಬಹುಮಾನ, 2017 ರಲ್ಲಿ ಮೈಸೂರಿ ನಲ್ಲಿ ನಡೆದ ಜಿಯೋಲಾಜಿಕಲ್ ಗಾರ್ಡನ್‍ನಲ್ಲಿ ನಡೆದ ಸ್ಪರ್ಧೆಯಲ್ಲಿ ಸರ್ಟಿಫಿಕೇಟ್ ಆಫ್ ಮೆರಿಟ್‍ಗೆ ಆಯ್ಕೆಗೊಂಡಿದ್ದರು.
ವನ್ಯಜೀವಿಗಳ ಚಲನ ವಲನವನ್ನು ವೀಕ್ಷಿಸಿ ಕ್ಯಾಮಾರಾದಲ್ಲಿ ಸೆರೆಹಿಡಿದು ಛಾಯಾಚಿತ್ರವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಪ್ರದರ್ಶಿಸುವ ಮೂಲಕ ವನ್ಯ ಜೀವಿಗಳ ಬಗ್ಗೆ ಅರಿವು ಹಾಗೂ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುವದಾಗಿ ಅವರು ಹೇಳುತ್ತಾರೆ.
- ಪುತ್ತರಿರ ಕರುಣ್ ಕಾಳಯ್ಯ