ಮಡಿಕೇರಿ, ಅ. 7: ಅಕ್ಟೋಬರ್ 13 ರಿಂದ ಭಾರತೀಯ ಸೇನೆಯಲ್ಲಿ ಜನರಲ್ ಸೋಲ್ಜರ್ ಹುದ್ದೆಗಾಗಿ ನೇಮಕಾತಿ ರ್ಯಾಲಿ ಮಂಡ್ಯದಲ್ಲಿ ನಡೆಯಲಿದ್ದು, ಇದರಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿರುವ ಯುವಕರಿಗೆ ಮಡಿಕೇರಿಯಲ್ಲಿ ಪೂರ್ವಭಾವಿ ತರಬೇತಿ ನೀಡಲಾಗುತ್ತಿದೆ.ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಈ ತರಬೇತಿಯನ್ನು ಪಾಲ್ಗೊಳ್ಳಲು ಉತ್ಸುಕರಾಗಿರುವ ಯುವಕರಿಗೆ ಮಡಿಕೇರಿಯಲ್ಲಿ ಪೂರ್ವಭಾವಿ ತರಬೇತಿ ನೀಡಲಾಗುತ್ತಿದೆ.ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಈ ತರಬೇತಿಯನ್ನು ನಂದಾ ನಂಜಪ್ಪ್ಪ, ಕರ್ನಲ್ ಮುತ್ತಣ್ಣ ಮತ್ತಿತರರ ಸಹಕಾರದೊಂದಿಗೆ ಯುವಕರಿಗೆ ಸೂಕ್ತ ಮಾರ್ಗದರ್ಶನ ಹಾಗೂ ತರಬೇತಿಯನ್ನು ನೀಡಲಾಗುತ್ತಿದೆ.

ಮುಖ್ಯವಾಗಿ ದೈಹಿಕ ತರಬೇತಿಯನ್ನು ಶಿಬಿರಾರ್ಥಿಗಳಿಗೆ ನೀಡಲಾಗುತ್ತಿದೆ. ಸುಮಾರು 41 ಯುವಕರು ಮಡಿಕೇರಿ ಕೊಡವ ಸಮಾಜದ ಮೂಲಕ ಹಮ್ಮಿಕೊಂಡಿ ರುವ ಈ ಶಿಬಿರಕ್ಕೆ ಹೆಸರು ನೋಂದಾ ಯಿಸಿಕೊಂಡಿದ್ದು, ಅಗತ್ಯ ಮಾರ್ಗ ದರ್ಶನವನ್ನು ಪಡೆದುಕೊಳ್ಳುತ್ತಿದ್ದಾರೆ.ಶಿಬಿರದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಎಲ್ಲಾ ಯುವಕರಿಗೆ ಮಡಿಕೇರಿ (ಮೊದಲ ಪುಟದಿಂದ) ಕೊಡವ ಸಮಾಜದ ಮೂಲಕ ಊಟ ಹಾಗೂ ವಸತಿಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಕೇವಲ ಕೊಡವ ಜನಾಂಗದ ಯುವಕರಲ್ಲದೆ ಇತರರೂ ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.

ಇಂದು ನಡೆದ ತರಬೇತಿಯ ಸಂದರ್ಭ ಸಮಾಜದ ಅಧ್ಯಕ್ಷ ಕೆ.ಎಸ್. ದೇವಯ್ಯ ಅವರ ನೇತೃತ್ವದ ಆಡಳಿತ ಮಂಡಳಿಯ ತಂಡದ ಪದಾಧಿಕಾರಿಗಳಾದ ಕಾಳೇಂಗಡ ಮುತ್ತಪ್ಪ, ಪುಟ್ಟಿಚಂಡ ಡಾನ್, ಮಾದೇಟಿರ ಬೆಳ್ಯಪ್ಪ ಅವರುಗಳು ಪಾಲ್ಗೊಂಡಿದ್ದರು.

ಈ ಬಗ್ಗೆ ‘ಶಕ್ತಿ’ಗೆ ಪ್ರತಿಕ್ರಿಯೆ ನೀಡಿರುವ ಸಮಾಜದ ಅಧ್ಯಕ್ಷ ಕೆ.ಎಸ್. ದೇವಯ್ಯ ಅವರು ಪ್ರಸಕ್ತ ಸಂಭವಿಸಿದ ಪ್ರಾಕೃತಿಕ ದುರಂತದ ಹಿನ್ನೆಲೆಯಲ್ಲಿ ಹಲವಾರು ರೀತಿಯ ಸಂಕಷ್ಟಗಳು ಎದುರಾಗಿವೆ. ಈ ನಿಟ್ಟಿನಲ್ಲಿ ಯುವಕರು ಸೇನೆಗೆ ಸೇರ್ಪಡೆಗೊಂಡು ಬದುಕು ಕಂಡುಕೊಳ್ಳಲು ನೆರವಾಗುವ ನಿಟ್ಟಿನಲ್ಲಿ ಸಮಾಜ ಈ ಚಿಂತನೆ ನಡೆಸಿದೆ. ಈ ಬಗ್ಗೆ ನಿವೃತ್ತ ಅಧಿಕಾರಿಗಳಾದ ಮೇಜರ್ ನಂದಾ ನಂಜಪ್ಪ, ಕರ್ನಲ್ ಮುತ್ತಣ್ಣ ಅವರುಗಳು ಸ್ಪಂದಿಸಿದ್ದು, ಇವರ ಮೂಲಕ ಮೈಸೂರು, ಬೆಳಗಾಂನಿಂದ ಅಧಿಕಾರಿಗಳು ಆಗಮಿಸಿ ತರಬೇತಿ ನೀಡುತ್ತಿದ್ದಾರೆ. ಇದರೊಂದಿಗೆ ಶಿಬಿರಾರ್ಥಿಗಳಿಗೆ ಜನರಲ್ ತಿಮ್ಮಯ್ಯ ಶಾಲೆಯಲ್ಲಿ ಸಾಮಾನ್ಯ ಜ್ಞಾನ ಹಾಗೂ ಲಿಖಿತ ಪರೀಕ್ಷೆಗೆ ಅಗತ್ಯವಿರುವ ಮಾರ್ಗದರ್ಶನವನ್ನು ಪರಿಣಿತರು ನೀಡುತ್ತಿರುವದಾಗಿ ತಿಳಿಸಿದರು.