ಕುಶಾಲನಗರ, ಅ. 7: ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಸಂಘದ ಬೇಡಿಕೆಗಳಿಗೆ ರಾಜ್ಯ ಸರಕಾರ ಶೀಘ್ರವಾಗಿ ಸ್ಪಂದಿಸದಿದ್ದಲ್ಲಿ ತಾ. 22 ರಂದು ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲಾಗುವದು ಎಂದು ಸಂಘಗಳ ಕೊಡಗು ಜಿಲ್ಲಾ ಘಟಕದ ಪ್ರಮುಖರು ತಿಳಿಸಿದ್ದಾರೆ.
ಕುಶಾಲನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಫಿಲಿಪ್‍ವಾಸ್, ತಮ್ಮ ನೌಕರರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ರಾಜ್ಯ ಸಂಘಗಳ ಪ್ರಮುಖರ ಸಭೆಯಲ್ಲಿ ನಿರ್ಧರಿಸಲಾಗಿದೆ. ಅದರಂತೆ ಹೆಚ್ಚುವರಿ ವೇತನವನ್ನು ಪ್ರತ್ಯೇಕವಾಗಿ ನೀಡದೆ ಮೂಲ ವೇತನದೊಂದಿಗೆ ಸೇರ್ಪಡೆ ಗೊಳಿಸುವದು, 2008 ಆಗಸ್ಟ್ 1 ನಂತರ ನೇಮಕವಾದ ಉಪನ್ಯಾಸ ಕರಿಗೂ ರೂ. 500 ವಿಶೇಷ ವೇತನ ನೀಡುವದು, ಪ್ರಾಂಶುಪಾಲರಿಗೆ ಪ್ರತ್ಯೇಕ ವೇತನ ಶ್ರೇಣಿ ನಿಗದಿಪಡಿಸುವದು, 1 ಸಾವಿರ ರೂ.ಗಳ ವಿಶೇಷ ಭ್ಯತ್ಯೆಯ ಬದಲಾಗಿ ವೇತನ ಬಡ್ತಿಯಾಗಿ ಮೂಲ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ರಾಜ್ಯ ಸಂಘಗಳ ಪ್ರಮುಖರ ಸಭೆಯಲ್ಲಿ ನಿರ್ಧರಿಸಲಾಗಿದೆ. ಅದರಂತೆ ಹೆಚ್ಚುವರಿ ವೇತನವನ್ನು ಪ್ರತ್ಯೇಕವಾಗಿ ನೀಡದೆ ಮೂಲ ವೇತನದೊಂದಿಗೆ ಸೇರ್ಪಡೆ ಗೊಳಿಸುವದು, 2008 ಆಗಸ್ಟ್ 1 ನಂತರ ನೇಮಕವಾದ ಉಪನ್ಯಾಸ ಕರಿಗೂ ರೂ. 500 ವಿಶೇಷ ವೇತನ ನೀಡುವದು, ಪ್ರಾಂಶುಪಾಲರಿಗೆ ಪ್ರತ್ಯೇಕ ವೇತನ ಶ್ರೇಣಿ ನಿಗದಿಪಡಿಸುವದು, 1 ಸಾವಿರ ರೂ.ಗಳ ವಿಶೇಷ ಭ್ಯತ್ಯೆಯ ಬದಲಾಗಿ ವೇತನ ಬಡ್ತಿಯಾಗಿ ಮೂಲ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ರಾಜ್ಯ ಸಂಘಗಳ ಪ್ರಮುಖರ ಸಭೆಯಲ್ಲಿ ನಿರ್ಧರಿಸಲಾಗಿದೆ. ಅದರಂತೆ ಹೆಚ್ಚುವರಿ ವೇತನವನ್ನು ಪ್ರತ್ಯೇಕವಾಗಿ ನೀಡದೆ ಮೂಲ ವೇತನದೊಂದಿಗೆ ಸೇರ್ಪಡೆ ಗೊಳಿಸುವದು, 2008 ಆಗಸ್ಟ್ 1 ನಂತರ ನೇಮಕವಾದ ಉಪನ್ಯಾಸ ಕರಿಗೂ ರೂ. 500 ವಿಶೇಷ ವೇತನ ನೀಡುವದು, ಪ್ರಾಂಶುಪಾಲರಿಗೆ ಪ್ರತ್ಯೇಕ ವೇತನ ಶ್ರೇಣಿ ನಿಗದಿಪಡಿಸುವದು, 1 ಸಾವಿರ ರೂ.ಗಳ ವಿಶೇಷ ಭ್ಯತ್ಯೆಯ ಬದಲಾಗಿ ವೇತನ ಬಡ್ತಿಯಾಗಿ ಮೂಲ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಹಂಡ್ರಂಗಿ ನಾಗರಾಜ್ ಮಾತನಾಡಿ, ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಇದ್ದ ವ್ಯವಸ್ಥೆಯನ್ನು ಆರ್ಥಿಕ ಇಲಾಖೆ ಮಾರ್ಪಾಡು ಮಾಡಿದೆ. ಪ್ರಸಕ್ತ ನೀತಿ ಗೊಂದಲವಾಗಿರುವ ಕಾರಣ ಕೆಲವೊಂದು ಬದಲಾವಣೆಗೆ ಆಗ್ರಹಿಸಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.
ಗೋಷ್ಠಿಯಲ್ಲಿ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಭವಾನಿ, ಪ್ರಧಾನ ಕಾರ್ಯದರ್ಶಿ ಮಹಾಲಿಂಗಯ್ಯ, ಖಜಾಂಚಿ ಪುರುಷೋತ್ತಮ್, ಉಪನ್ಯಾಸಕರ ಸಂಘದ ಗೌರವಾಧ್ಯಕ್ಷ ಅಶ್ವಿನಿಕುಮಾರ್ ಇದ್ದರು.