ಸುಂಟಿಕೊಪ್ಪ, ಅ. 7: ಸುಂಟಿಕೊಪ್ಪದ ಶ್ರೀ ಚಾಮುಂಡೇಶ್ವರಿ ಹಾಗೂ ಶ್ರೀ ಮುತ್ತಪ್ಪ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ತಾ. 10 ರಂದು ಅರಿಶಣ ಅಲಂಕಾರ, ತಾ. 11 ರಂದು ಕಡ್ಲೆ ಅಲಂಕಾರ, ತಾ. 12 ರಂದು ಕುಂಕುಮ ಅಲಂಕಾರ, ತಾ. 13 ರಂದು ಬಟಾಣಿ ಮತ್ತು ದಾಳಿಂಬೆ ಅಲಂಕಾರ, ತಾ 14 ರಂದು ಗಂಧ ಅಲಂಕಾರ, ತಾ.15 ರಂದು ಹೂವು ಹಣ್ಣಿನ ಅಲಂಕಾರ, ತಾ.16 ರಂದು ಬೆಣ್ಣೆ ಅಲಂಕಾರ, ತಾ.17 ರಂದು ದಾಕ್ಷಿ-ಗೋಡಂಬಿ ಅಲಂಕಾರ ತಾ.18 ರಂದು ಆಭರಣ ಅಲಂಕಾರ ಹಾಗೂ ತಾ. 19 ರಂದು ವಿಶೇಷ ಅಲಂಕಾರ ಪೂಜೆ ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಮತ್ತು ಆಡಳಿತ ಮಂಡಳಿ ತಿಳಿಸಿದ್ದಾರೆ.