ಮಡಿಕೇರಿ, ಅ. 7: ಇತ್ತೀಚೆಗೆ ಸಂಭವಿಸಿದ ಅತಿವೃಷ್ಟಿ ಹಾನಿಯಿಂದ ಕಾಲೂರು ಗ್ರಾಮ ಸಂಪೂರ್ಣವಾಗಿ ನಾಶವಾಗಿದ್ದರೂ ಸರಕಾರದ ಪರಿಹಾರ ಕಾರ್ಯ ವಿಳಂಬವಾಗುತ್ತಿದೆ. ಈ ಹಿನ್ನೆಲೆ ಗ್ರಾಮಸ್ಥರ ಅಭಿಪ್ರಾಯದಂತೆ ಮುತ್ತುನಾಡ್ ಯುವಕ ಸಂಘವನ್ನು ರಚಿಸಿಕೊಂಡು ಸಂತ್ರಸ್ತರ ನೆರವಿಗೆ ಧಾವಿಸಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ನಂದಿರ ಹರಿ ಚಂಗಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಪತ್ತಿನಲ್ಲಿ ಸುಮಾರು 6 ಗ್ರಾಮ ಪಂಚಾಯಿತಿಗಳಿಗೆ ಒಳಪಡುವ 40 ಗ್ರಾಮಗಳು ಹಾನಿಗೀಡಾಗಿದ್ದು, ಕಾಲೂರು ಗ್ರಾಮಕ್ಕೆ ಹೆಚ್ಚು ನಷ್ಟವಾಗಿದೆ. ಬೆಟ್ಟಗುಡ್ಡಗಳು ಕುಸಿದಿದ್ದು, ಜಲ ಸ್ಫೋಟದಿಂದ ಜನ ಅತಂತ್ರರಾಗಿದ್ದಾರೆ. ಮನೆಗಳು ಸರ್ವನಾಶವಾಗಿದ್ದು, ಕೆಲವು ಗ್ರಾಮಗಳಲ್ಲಿ ಜೀವಹಾನಿಯೂ ಸಂಭವಿಸಿದೆ. ಗದ್ದೆ ಹಾಗೂ ತೋಟಗಳು ಕೆಸರಿನಲ್ಲಿ ಕೊಚ್ಚಿಕೊಂಡು ಹೋಗಿವೆ.
ಕಾಲೂರು ಗ್ರಾಮದ ಕುರಿತು ರಾಜ, ಮಹರಾಜರೇ “ಹತ್ತುನಾಡು ಕೊಟ್ಟರೂ ಮುತ್ತುನಾಡು ಕೊಡಲಾರೆ” ಎಂದು ಉಲ್ಲೇಖಿಸಿರುವ ವಿಚಾರ ಮಡಿಕೇರಿ, ಅ. 7: ಇತ್ತೀಚೆಗೆ ಸಂಭವಿಸಿದ ಅತಿವೃಷ್ಟಿ ಹಾನಿಯಿಂದ ಕಾಲೂರು ಗ್ರಾಮ ಸಂಪೂರ್ಣವಾಗಿ ನಾಶವಾಗಿದ್ದರೂ ಸರಕಾರದ ಪರಿಹಾರ ಕಾರ್ಯ ವಿಳಂಬವಾಗುತ್ತಿದೆ. ಈ ಹಿನ್ನೆಲೆ ಗ್ರಾಮಸ್ಥರ ಅಭಿಪ್ರಾಯದಂತೆ ಮುತ್ತುನಾಡ್ ಯುವಕ ಸಂಘವನ್ನು ರಚಿಸಿಕೊಂಡು ಸಂತ್ರಸ್ತರ ನೆರವಿಗೆ ಧಾವಿಸಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ನಂದಿರ ಹರಿ ಚಂಗಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಪತ್ತಿನಲ್ಲಿ ಸುಮಾರು 6 ಗ್ರಾಮ ಪಂಚಾಯಿತಿಗಳಿಗೆ ಒಳಪಡುವ 40 ಗ್ರಾಮಗಳು ಹಾನಿಗೀಡಾಗಿದ್ದು, ಕಾಲೂರು ಗ್ರಾಮಕ್ಕೆ ಹೆಚ್ಚು ನಷ್ಟವಾಗಿದೆ. ಬೆಟ್ಟಗುಡ್ಡಗಳು ಕುಸಿದಿದ್ದು, ಜಲ ಸ್ಫೋಟದಿಂದ ಜನ ಅತಂತ್ರರಾಗಿದ್ದಾರೆ. ಮನೆಗಳು ಸರ್ವನಾಶವಾಗಿದ್ದು, ಕೆಲವು ಗ್ರಾಮಗಳಲ್ಲಿ ಜೀವಹಾನಿಯೂ ಸಂಭವಿಸಿದೆ. ಗದ್ದೆ ಹಾಗೂ ತೋಟಗಳು ಕೆಸರಿನಲ್ಲಿ ಕೊಚ್ಚಿಕೊಂಡು ಹೋಗಿವೆ.
ಕಾಲೂರು ಗ್ರಾಮದ ಕುರಿತು ರಾಜ, ಮಹರಾಜರೇ “ಹತ್ತುನಾಡು ಕೊಟ್ಟರೂ ಮುತ್ತುನಾಡು ಕೊಡಲಾರೆ” ಎಂದು ಉಲ್ಲೇಖಿಸಿರುವ ವಿಚಾರ
ಪರಿಹಾರ ನಿಗಧಿ ಮಾಡಬೇಕು ಮತ್ತು ಇದಕ್ಕಾಗಿ ಸಮಿತಿಯೊಂದನ್ನು ನೇಮಿಸಿ ಎಕರೆಗೆ ಕನಿಷ್ಟ ರೂ. 20 ಲಕ್ಷ ಪರಿಹಾರ ನೀಡಬೇಕು.
ಮನೆ ಕಳೆದುಕೊಂಡವರಿಗೆ ಕನಿಷ್ಟ ರೂ. 10 ಲಕ್ಷ ಪರಿಹಾರ ಧನ ನೀಡಬೇಕು. ಸಂತ್ರಸ್ತರು ಬಯಸಿದರೆ ಬೇರೆ ಪ್ರದೇಶದಲ್ಲಿ ನಿವೇಶನ ಗುರುತಿಸಿ ಮನೆ ಕಟ್ಟಿಕೊಡಬೇಕು ಇಲ್ಲವೆ ಅವರು ಬಯಸಿದ ಜಾಗದಲ್ಲಿಯೇ ಮನೆ ನಿರ್ಮಿಸಬೇಕು. ಕೆಲವರ ಮನೆ ಬಿರುಕು ಬಿಟ್ಟಿದ್ದು, ವಾಸ ಮಾಡಲು ಸಾಧ್ಯವಿಲ್ಲದ ಕಾರಣ ಅವರಿಗೂ ಮನೆ ನೀಡÀಬೇಕು.
ಕೆಲವು ಪ್ರದೇಶಗಳಲ್ಲಿ ಮಳೆಗಾಲ ದಲ್ಲಿ ಅತಂತ್ರ ಸ್ಥಿತಿ ನಿರ್ಮಾಣ ವಾಗುವದರಿಂದ ಮಳೆಗಾಲದ 3 ತಿಂಗಳು ಪ್ರತ್ಯೇಕವಾದ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಬೇಕು. ಸಂತ್ರಸ್ತರ ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನು ಸಂಪೂರ್ಣವಾಗಿ ಸರ್ಕಾರವೇ ಭರಿಸಬೇಕು.
ಗ್ರಾಮಗಳಲ್ಲಿ ಎಲ್ಲಾ ಬೆಳೆಗಳು ನೆಲಕಚ್ಚಿರುವದರಿಂದ, ಇನ್ನು ಹೊಸದಾಗಿ ಕೃಷಿ ಪ್ರಾರಂಭಿಸಬೇಕಾದ ಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಮುಂದಿನ 5 ವರ್ಷಗಳವರೆಗೆ ಗ್ರಾಮದ ಸಂತ್ರಸ್ತ ಕುಟುಂಬವೊಂದಕ್ಕೆ ತಿಂಗಳಿಗೆ ರೂ. 15 ಸಾವಿರ ಮಾಸಾಶನ ನೀಡಬೇಕು.
ಸರ್ಕಾರಕ್ಕೆ ಅರ್ಜಿ ಸಲ್ಲಿಸುವ ಸಂದರ್ಭ ಆದಾಯ ಪ್ರಮಾಣ ಪತ್ರ ಬೇಕಾಗುತ್ತದೆ. ಈಗ ಆದಾಯವೇ ಇಲ್ಲದಿರುವದರಿಂದ ಸಂತ್ರಸ್ತರಿಗೆ ಆದಾಯ ಪ್ರಮಾಣ ಪತ್ರ ಒದಗಿಸುವಾಗ ಸೂಕ್ತ ಬದಲಾವಣೆ ಅಗತ್ಯವಿದೆ.
ಗ್ರಾಮದ ಸಂಪೂರ್ಣ ಕೃಷಿ ನಾಶವಾಗಿರುವದರಿಂದ ಸಂತ್ರಸ್ತ ಗ್ರಾಮಸ್ಥರ ಎಲ್ಲಾ ಸಾಲಗಳನ್ನು ಭೆÉೀಷರತ್ತಾಗಿ ಮನ್ನಾ ಮಾಡಬೇಕು. 5 ವರ್ಷದ ಅವಧಿಗೆ ಬಡ್ಡಿ ರಹಿತ ಸಾಲ ನೀಡಬೇಕು. ಪ್ರತಿ ಸಂತ್ರಸ್ತರಿಗೂ ಆಯಾ ಜಾಗ, ಮನೆ, ತೋಟಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಸಮಸ್ಯೆಗಳಿರುವದರಿಂದ ಅವರ ಅನುಪಸ್ಥಿತಿಯಲ್ಲಿ ಸರ್ಕಾರ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳದೆ ಸಕಾಲದಲ್ಲಿ ಸಮಸ್ಯೆಗೆ ಸ್ಪಂದಿಸಿ ಸೂಕ್ತ ಪರಿಹಾರ ನೀಡಬೇಕು.
ಇದುವರೆಗೆ ಕೊಡಗಿನಲ್ಲಿ ಸಂಭವಿಸದೇ ಇದ್ದ ಈ ಘೋರ ವಿಪತ್ತನ್ನು ಕಾನೂನಿನ ಚೌಕಟ್ಟಿನಿಂದ ಹೊರತುಪಡಿಸಿ ಮಾನವೀಯತೆ ನೆಲೆಯಲ್ಲಿ ನೋಡಬೇಕು. ಸರಕಾರ ಈ ಬೇಡಿಕೆಗಳನ್ನು ಅರ್ಥ ಮಾಡಿಕೊಂಡು ಸಂತ್ರಸ್ತರಿಗೆ ಪರಿಹಾರ ನೀಡಿದರೆ ಮಾತ್ರ ಗ್ರಾಮಸ್ಥರು ಬದಕಲು ಸಾಧ್ಯ ಎಂದು ಹರಿ ಚಂಗಪ್ಪ ಅಭಿಪ್ರಾಯಪಟ್ಟರು.
ಸಂತ್ರಸ್ತರಿಗೆ ನೆರವಾಗುವ ನಿಟ್ಟಿನಲ್ಲಿ ಮುತ್ತುನಾಡ್ ಯುವಕ ಸಂಘವು ಈಗಾಗಲೇ ಹೊಸ ಬ್ಯಾಂಕ್ ಖಾತೆಯನ್ನು ತೆರೆದಿದ್ದು, ದಾನಿಗಳು ಸಹಕಾರ ನೀಡುವಂತೆ ಕೋರಿದರು. ಹೆಚ್ಚಿನ ಮಾಹಿತಿಗಾಗಿ 9480905124, 9632973233, 7760840879 ಸಂಪರ್ಕಿಸಬಹುದಾಗಿದೆ.
ಸುದ್ದಿಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷ ಚೆನ್ನಪಂಡ ನರೆನ್ ಸೋಮಯ್ಯ ಉಪಾಧ್ಯಕ್ಷ ಗಗನ್, ಕಾರ್ಯದರ್ಶಿ ಸಿದ್ದಂಡ ಪವನ್, ಉಪ ಕಾರ್ಯದರ್ಶಿ ಸಿದ್ದಂಡ ಶಶಿ ಹಾಗೂ ಖಜಾಂಚಿ ಸುಜಿತ್ ಬಾಣೆಗದ್ದೆ ಉಪಸ್ಥಿತರಿದ್ದರು.