ಗೋಣಿಕೊಪ್ಪ ವರದಿ, ಅ. 7: ಕೊಡಗು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ವತಿಯಿಂದ ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮದಿನ ಅಂಗವಾಗಿ ‘ಏಕಾತ್ಮಮಾನವ ದರ್ಶನ ಒಂದು ಚಿಂತನೆ’ ಹಾಗೂ ಡಾ. ಆನಂದ್‍ಕಾರ್ಲ ಅವರು ಬೆರೆದಿರುವ ‘ಧ್ವನಿ-ಪ್ರತಿಧ್ವನಿ-ರಾಷ್ಟ್ರಕ್ಕಾಗಿ’ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ತಾ. 8 ರಂದು ಇಲ್ಲಿನ ಸೌಖ್ಯ ಹಾಲ್‍ನಲ್ಲಿ ಸಾಯಂಕಾಲ 4.30 ಕ್ಕೆ ಏರ್ಪಡಿಸಲಾಗಿದೆ.
ಕೊಡಗು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಅಡ್ಡಂಡ ಸಿ. ಕಾರ್ಯಪ್ಪ, ರಾಜ್ಯ ಸಂಚಾಲಕ ನಾರಾಯಣ ಶೆವಿರೆ ಹಾಗೂ ನಿವೃತ್ತ ಪ್ರೊಫೆಸರ್ ಇಟ್ಟೀರ ಕೆ. ಬಿದ್ದಪ್ಪ ಪಾಲ್ಗೊಳ್ಳಲಿದ್ದಾರೆ.