ಮಡಿಕೇರಿ, ಅ. 7: ಪ್ರಾದೇಶಿಕ ಜನ ಸಂಪರ್ಕ ಕಾರ್ಯಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ನವದೆಹಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಮಡಿಕೇರಿಯ ಸಹಯೋಗದೊಂದಿಗೆ ಸಂಪಾಜೆ ಸಂಯುಕ್ತ ಪದವಿಪೂರ್ವ ಕಾಲೇಜು ಸಂಪಾಜೆ ಅಂಗನವಾಡಿ ಕೇಂದ್ರ, ಸಂಪಾಜೆ ನಿರಾಶ್ರಿತರ ಕೇಂದ್ರದಲ್ಲಿ ಪೋಷಣ್ ಮಾಸ ಅಭಿಯಾನದಡಿ ಬೀದಿ ನಾಟಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮ, ಅಂಗನವಾಡಿ ದಿನಾಚರಣೆ, ಮಾತೃಪೂರ್ಣ ದಿನಾಚರಣೆ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ನೆರವೇರಿತು. ನಿತ್ಯ ಸ್ನೇಹಿ ಕಲಾತಂಡ ಮಂಡ್ಯ ಕಾಲವಿದರಾದ ನಾಗರಾಜು, ಶೇಖರ್, ಬಸವರಾಜು, ಶಿವಕುಮಾರ್, ಬಂದೇಶ್, ಸ್ವಾಮಿ, ರೋಜ್ಮೇರಿ, ಮೀನಾಕ್ಷಿ ಇವರುಗಳು ಪೌಷ್ಟಿಕ ಆಹಾರದ ಮಹತ್ವ, ಸಾಮಾಜಿಕ ಪಿಡುಗುಗಳ ಬಗ್ಗೆ ಅರಿವು, ಇಲಾಖಾ ಯೋಜನೆಗಳ ಸಧ್ಬಳಕೆ ಬಗ್ಗೆ, ಸ್ವಚ್ಛತೆಯ ಕುರಿತು ಬೀದಿ ನಾಟಕದ ಮೂಲಕ ಅರಿವು ಮೂಡಿಸಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಂಡಂಡ ಸವಿತಾ ಕೀರ್ತನ್ ಅವರು ತಮಟೆ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇಲಾಖೆಯಲ್ಲಿ ಸಿಗುವ ಎಲ್ಲಾ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಚೆಂಬು ಗ್ರಾ.ಪಂ. ಅಧ್ಯಕ್ಷ ಮಾಧವ ಪೂವಯ್ಯ ಮಜಲು, ಉಪಾಧ್ಯಕ್ಷೆ ವನಿತಾ, ಸಂಪಾಜೆ ಸಂಯುಕ್ತ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ಕೆ.ಜಿ. ರಾಜರಾಮ, ಸಂಸ್ಥೆಯ ಸಂಚಾಲಕ ಎಂ. ಶಂಕರನಾರಾಯಣ ಭಟ್, ಪ್ರಾಂಶುಪಾಲೆ ವೈ.ಕೆ. ಮಾಲತಿ, ಮುಖ್ಯ ಶಿಕ್ಷಕರಾದ ಐತಪ್ಪ, ಲೋಕೇಶ್ ಗುಡ್ಡೆಮನಿ ಉಪಸ್ಥತರಿದ್ದರು. ಗುರು ಪುರುಷ ಆರೋಗ್ಯ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರಾದ ಸತ್ಯವತಿ, ಕುಸುಮಾವತಿ ಹಾಗೂ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ದಮಯಂತಿ ಕಾರ್ಯಕ್ರಮದ ಆಯೋಜನೆಗೆ ಶ್ರಮಿಸಿದರು.