ಸೋಮವಾರಪೇಟೆ, ಅ. 6: ಪಟ್ಟಣದ ವಂಶಿ ಕಲಾಶಾಲೆಯ ವಿದ್ಯಾರ್ಥಿನಿ ಟಿ.ಎಂ. ಆಶ್ರಿತ ಅವರು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಭರತನಾಟ್ಯ ಕಿರಿಯರ ವಿಭಾಗದ ಸ್ಪರ್ಧೆಯಲ್ಲಿ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಐಗೂರು ಗ್ರಾಮದ ಮುತ್ತಪ್ಪ ಮತ್ತು ರಶ್ಮಿ ದಂಪತಿಗಳ ಪುತ್ರಿಯಾದ ಇವರು ಸಾಂದೀಪನಿ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ವಂಶಿ ಕಲಾಶಾಲೆಯ ಗುರುಗಳಾದ ಧನಲಕ್ಷ್ಮಿ ರಘು ಅವರಿಂದ ತರಬೇತಿ ಪಡೆಯುತ್ತಿದ್ದಾರೆ.