ಮಡಿಕೇರಿ, ಅ. 6 : ಕೊಡಗು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಇದೀಗ ಜಿಲ್ಲೆಯಿಂದ ವರ್ಗಾವಣೆ ಗೊಂಡಿದ್ದಾರೆ. ವರ್ಗಾವಣೆ ಆದೇಶ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಇದೀಗ ಜಿಲ್ಲೆಯಿಂದ ವರ್ಗಾವಣೆ ಗೊಂಡಿದ್ದಾರೆ. ವರ್ಗಾವಣೆ ಆದೇಶ ಐ.ಎ.ಎಸ್. ಅಧಿಕಾರಿಯಾಗಿರುವ ಇವರು ಕೊಡಗು ಜಿ.ಪಂ. ಸಿ.ಇ.ಓ. ಸ್ಥಾನದೊಂದಿಗೆ ಯೋಜನಾ ನಿರ್ದೇಶಕರಾಗಿಯೂ ಅಧಿಕಾರ ಹೊಂದಿದ್ದಾರೆ. ವರ್ಗಾಣೆ ಗೊಳ್ಳುತ್ತಿರುವ ಸಿ.ಇ.ಓ. ಪ್ರಶಾಂತ್ ಕುಮಾರ್ ಮಿಶ್ರಾ ಅವರಿಂದ ಅಧಿಕಾರ ಸ್ವೀಕರಿಸಿದ ಬಳಿಕ ಅವರು ಸಂಜೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ವೀಡಿಯೋ ಕಾನ್ಫರೆನ್ಸ್‍ನಲ್ಲಿ ಪಾಲ್ಗೊಂಡರು.(ಮೊದಲ ಪುಟದಿಂದ) ಕೊಡಗಿನಲ್ಲಿ ಮರೆಯಲಾಗದ ಅನುಭವ : ಮಿಶ್ರಾಕೊಡಗು ಜಿಲ್ಲೆ ತಮಗೆ ಮರೆಯಲಾಗದ ಅನುಭವಗಳನ್ನು ನೀಡಿದೆ. ಜಿಲ್ಲೆಯ ಜನರು ಎಲ್ಲ ರೀತಿಯಲ್ಲಿ ಸಹಕರಿಸಿದ್ದಾರೆ. ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಇವರುಗಳು ಜಿಲ್ಲೆಯ ಅಭಿವೃದ್ಧಿ - ಕಾಳಜಿ ವಿಚಾರದಲ್ಲಿ ಎಲ್ಲ ರೀತಿಯ ಸಹಕಾರ ನೀಡಿದ್ದಾರೆ. ಪ್ರಾಕೃತಿಕ ವಿಕೋಪದ ಸಂದರ್ಭ ದೊರೆತ ಅನುಭವ ಅವಿಸ್ಮರಣೀಯವಾಗಿದೆ ಎಂದು ವರ್ಗಾವಣೆಗೊಂಡಿರುವ ಸಿ.ಇ.ಓ. ಪ್ರಶಾಂತ್ ಕುಮಾರ್ ಮಿಶ್ರಾ ‘ಶಕ್ತಿ’ಯೊಂದಿಗೆ ಅಭಿಪ್ರಾಯ ವ್ಯಕ್ತಪಡಿಸಿದರು.