ಶನಿವಾರಸಂತೆ, ಅ. 6: ಸಮೀಪದ ಮುಳ್ಳೂರು ಗ್ರಾಮದ ಕಾರ್ಗೋಡ್ ಬಸವೇಶ್ವರ ಯುವಕ ಸಂಘದ ವತಿಯಿಂದ ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ ವಿಜೇತ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಸಿ.ಎಸ್. ಸತೀಶ್ ಅವರನ್ನು ಸನ್ಮಾನಿಸಲಾಯಿತು.

ಶಾಲಾ ಆವರಣದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು ಸತೀಶ್ ಅವರನ್ನು ಗೌರವಿಸಿದರು. ಸಂಘದ ಅಧ್ಯಕ್ಷ ಸತ್ಯವೇಲು, ಪದಾಧಿಕಾರಿಗಳಾದ ರಾಜೇಶ್, ಮನೋಹರ್, ಪ್ರಮಿ, ಮನು, ಸತೀಶ್, ಶಾಲಾ ಮುಖ್ಯ ಶಿಕ್ಷಕ ಮಂಜುನಾಥ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಮಣಿ, ಹಂಡ್ಲಿ ಕ್ಲಸ್ಟರ್ ಸಿ.ಆರ್.ಪಿ. ಮಧುಕುಮಾರ್, ನಿಡ್ತ ಶಾಲೆ ಶಿಕ್ಷಕ ದಿನೇಶ್ ಹಾಜರಿದ್ದರು.