ಭಾಗಮಂಡಲ, ಅ. 6: ಇಲ್ಲಿನ ಲ್ಯಾಂಪ್ ಸಹಕಾರ ಸಂಘದ 2017-18 ರ ಸಾಲಿನ 36ನೇ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಕೆ.ಕೆ. ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ ನೂತನ ಗೋದಾಮು ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಲಾಯಿತು. ಬಳಿಕ ಮಾತನಾಡಿದ ಸಂಘದ ಅಧ್ಯಕ್ಷ ಕೆ.ಕೆ. ಕುಮಾರ್ 2017-18 ರ ಸಾಲಿನಲ್ಲಿ ಸಂಘವು ರೂ. 2.53 ಲಕ್ಷ ನಿವ್ವಳ ಲಾಭವನ್ನು ಗಳಿಸಿದ್ದು ಕಳೆದ ಸಾಲಿಗಿಂತ ರೂ. 85153 ಹೆಚ್ಚಾಗಿದೆ ಎಂದರು.
ಸಂಘದ ಕೆಲವು ಸದಸ್ಯರು ಮಾತನಾಡಿ ಈಗಾಗಲೇ ಅಮಾನತ್ತಿನಲ್ಲಿರುವ ಸಂಘದ ಸದಸ್ಯರ ಷೆÉೀರು ಹಣವನ್ನು ಭರ್ತಿ ಮಾಡಲು ಸರಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿಕೊಡುವ ಸಲಹೆ ನೀಡಿದರು. ಗಿರಿಜನ ಸದಸ್ಯರುಗಳಿಗೆ ಸಂಘದ ವತಿಯಿಂದ ಫಸಲು ಸಾಲ, ಜಾಮೀನು ಸಾಲ ಹಾಗೂ ಇನ್ನಿತರ ಸೌಲಭ್ಯಗಳನ್ನು ನೀಡುವಂತೆ ಕೋರಿಕೊಂಡರು.
ಸಂಘದ ನಿರ್ದೇಶಕರಾಗಿರುವ ಮಿಟ್ಟು ರಂಜಿತ್ ಮಾತನಾಡಿ ಸಂಘದ ಅಧ್ಯಕ್ಷರಾಗಿರುವ ಕೆ.ಕೆ. ಕುಮಾರ್ ಹಾಲಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿರುವ ಕಾರಣ ಕೊಡಗು ಜಿಲ್ಲೆಗೆ ಸರಕಾರದಿಂದ ಮಂಜೂರಾಗಿರುವ ಆದಿವಾಸಿ ಭವನವನ್ನು ಮಡಿಕೇರಿ ತಾಲೂಕಿನ ವ್ಯಾಪ್ತಿಯೊಳಗೆ ಜಾಗವನ್ನು ಖರೀದಿ ಮಾಡಿ ಭವನವನ್ನು ನಿರ್ಮಾಣ ಮಾಡಲು ಶ್ರಮಿಸುವಂತೆ ಕೋರಿಕೊಂಡÀರು. ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ ಸಂಘದ ಸದಸ್ಯರಿಗೆ ಸಹಾಯವನ್ನು ಒದಗಿಸುವ ಕುರಿತು ತೀರ್ಮಾನಿಸಲಾಯಿತು. ಮಹಾಸಭೆಯಲ್ಲಿ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.