ಸೋಮವಾರಪೇಟೆ, ಅ. 6: ಸಮೀಪದ ಗೌಡಳ್ಳಿ ಗ್ರಾಮದ ಮಹಿಳಾ ಸಹಕಾರ ಸಂಘಕ್ಕೆ ಪ್ರಸಕ್ತ ಸಾಲಿನ ಉತ್ತಮ ಮಹಿಳಾ ಸಹಕಾರ ಸಂಘದ ಪ್ರಶಸ್ತಿ ಲಭಿಸಿದೆ.

ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಪ್ರತಿವರ್ಷ ಪ್ರಶಸ್ತಿಯನ್ನು ನೀಡುತ್ತಿದ್ದು, 2017-18ನೇ ಸಾಲಿನ ಪ್ರಶಸ್ತಿಯನ್ನು ಗೌಡಳ್ಳಿ ಮಹಿಳಾ ಸಹಕಾರ ಸಂಘ ಪಡೆದುಕೊಂಡಿದೆ. ಪ್ರಶಸ್ತಿಯನ್ನು ಸಂಘದ ಅಧ್ಯಕ್ಷರಾದ ಪುಷ್ಪಾ ಅವರು ಕೊಡಗು ಡಿಸಿಸಿ ಬ್ಯಾಂಕ್‍ನ 93ನೇ ಮಹಾಸಭೆಯಲ್ಲಿ ಸ್ವೀಕರಿಸಿದರು. ಪ್ರಶಸ್ತಿಯೊಂದಿಗೆ ರೂ.15ಸಾವಿರ ನಗದು ಪುರಸ್ಕಾರವನ್ನು ನೀಡಲಾಯಿತು.