ಮಡಿಕೇರಿ, ಅ. 6: ಅತ್ಯಂತ ಪುಟ್ಟ ಜಿಲ್ಲೆ ಕೊಡಗು ಪ್ರವಾಸಿಗರ ಪ್ರವಾಹದಲ್ಲಿ ತೇಲಿ ಹೋಗುತ್ತಿದ್ದ ಕಾಲವೊಂದಿತ್ತು. ಆದರೆ ಇಂದು ಪ್ರವಾಸಿಗರಿಗೆ ಬರ ಬಂದಿದೆ, ಜಿಲ್ಲೆ ಮಹಾಮಳೆಯ ಅನಾಹುತದ ಕರಿಛಾಯೆಯನ್ನು ಹೊದ್ದು ಮಲಗಿದ್ದು, ಪ್ರವಾಸೋದ್ಯಮವನ್ನೇ ನಂಬಿ ಬದುಕುತ್ತಿರುವ ಕುಟುಂಬಗಳು ಅಸಹಾಯಕ ಸ್ಥಿತಿಯನ್ನು ಎದುರಿಸುತ್ತಿವೆ.ಧಾರಾಕಾರ ಮಳೆಯ ಕೆಸರಿನಾರ್ಭಟಕ್ಕೆ ಸಿಲುಕಿ ಸಾವು, ನೋವಿನಲ್ಲಿ ದಿನ ದೂಡುತ್ತಿರುವ ಮಂದಿಯ ನಡುವೆ ಪ್ರವಾಸೋದ್ಯ ಮವನ್ನೇ ಬಂಡವಾಳವನ್ನಾಗಿ ಮಾಡಿ ಕೊಂಡಿದ್ದವರ ಇಂದಿನ ಸ್ಥಿತಿಗೂ, ಸಂತ್ರಸ್ತರ ದುಸ್ಥಿತಿಗೂ ಹೆಚ್ಚೇನು ವ್ಯತ್ಯಾಸ ಕಂಡು ಬರುತ್ತಿಲ್ಲ. ಪ್ರವಾಸಿಗರನ್ನೇ ನಂಬಿಕೊಂಡು ಸಾಲ ಮಾಡಿ ಹೊಟೇಲ್, ರೆಸ್ಟೋರೆಂಟ್, ರೆಸಾರ್ಟ್, ಹೋಂಸ್ಟೇಗಳನ್ನು ನಡೆಸುತ್ತಿದ್ದವರು ಸುಮಾರು 20 ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗದ ಅವಕಾಶವನ್ನು ಕಲ್ಪಿಸಿದ್ದರು. ಅಲ್ಲದೆ ಪ್ರವಾಸಿಗರ ಆಗಮನದಿಂದಲೇ ವಿವಿಧ ಕ್ಷೇತ್ರಗಳಲ್ಲಿ ಆರ್ಥಿಕ ಪ್ರಗತಿ ಉತ್ತಮ ಸ್ಥಿತಿಯಲ್ಲಿತ್ತು.ಆದರೆ ಬಂಡವಾಳ ಹಾಕಿರುವ ಉದ್ಯಮಿಗಳು ಮಹಾಮಳೆಯ ಪರಿಣಾಮದಿಂದ ಕಂಗಾಲಾಗಿದ್ದು, ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿ ದ್ದಾರೆ. ಸಾಲಕ್ಕೆ ಬಡ್ಡಿ ಕಟ್ಟಲು ಕೂಡ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ವಾಗಿದೆ. ಕಳೆದ ಎರಡು ತಿಂಗಳಿನಿಂದ ನೌಕರರಿಗೆ ವೇತನ ನೀಡುವಷ್ಟು ಕೂಡ ವ್ಯವಹಾರವಾಗುತ್ತಿಲ್ಲ. ಕೆಲಸವಿಲ್ಲದೆ ಸಿಬ್ಬಂದಿಗಳು ಊರು ಬಿಡುವ ಪರಿಸ್ಥಿತಿ ಬಂದಿದೆ. ಮಾಲೀಕರು ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದು, ಪ್ರವಾಸಿಗರಿಲ್ಲದೆ ಕೊಡಗು ಹೀಗೆ ಮುಂದುವರಿದರೆ ಯುವ ಸಮೂಹ ಜಿಲ್ಲೆಯಿಂದ ವಲಸೆ ಹೋಗುವ ಸನ್ನಿವೇಶ ಸೃಷ್ಟಿಯಾಗಬಹುದೆಂದು ಕೊಡಗು ಜಿಲ್ಲಾ ಹೊಟೇಲ್, ರೆಸಾರ್ಟ್ ಮತ್ತು ಉಪಹಾರ ಗೃಹಗಳ ಸಂಘ ಆತಂಕ ವ್ಯಕ್ತಪಡಿಸಿದೆ.

ಮಹಾರಾಜ ಪ್ರಚಾರ ರಾಯಭಾರಿ

ಪ್ರವಾಹದಲ್ಲಿ ಕೊಚ್ಚಿ ಹೋದ ಕೊಡಗು ಪ್ರವಾಸೋದ್ಯಮಕ್ಕೆ ಮರುಜೀವ ನೀಡುವ ನಿಟ್ಟಿನಲ್ಲಿ ಸಂಘ ಕಾರ್ಯೋನ್ಮುಖವಾಗಿದೆ. ಕೊಡಗು ಸೇರಿದಂತೆ ಹಲವು ಜಿಲ್ಲೆಗಳ ಪ್ರಚಾರ ರಾಯಭಾರಿಯಾಗಿರುವ ಮೈಸೂರು ಮಹಾರಾಜ ಯದುವೀರ್ ಒಡೆಯರ್ ಅವರನ್ನು ಜಿಲ್ಲೆಗೆ ಆಹ್ವಾನಿಸಿದ್ದು, ಮಹಾರಾಜರು ಸಂತೋಷದಿಂದಲೇ ಒಪ್ಪಿಕೊಂಡಿದ್ದಾರೆ ಎಂದು ಸಂಘದ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ತಿಳಿಸಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು ಪ್ರಾಕೃತಿಕ ವಿಕೋಪ ಸಂಭವಿಸಿ ಎರಡು ತಿಂಗಳು ಸಮೀಪಿಸಿದ್ದು, ಪ್ರವಾಸೋದ್ಯಮಕ್ಕೆ ಜಿಲ್ಲೆ ತೆರೆದುಕೊಂಡಿದೆ. ಆದರೆ ಪ್ರವಾಸಿಗರ ಆಗಮನದ ನಿರೀಕ್ಷೆಗಳು ಹುಸಿಯಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಕೊಡಗಿಗೆ ಪ್ರವಾಸಿಗರÀನ್ನು ಸೆಳೆÉಯುವÀ ಉದ್ದೇಶದಿಂದ ಪ್ರವಾಸೋದ್ಯಮದ ಚೇತರಿಕೆಗೆ ಪೂರಕವಾದ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಜಿಲ್ಲೆಯ ಪ್ರವಾಸೋದ್ಯಮ ರಾಯಭಾರಿಯಾಗಿ ನಿಯೋಜನೆ ಗೊಂಡಿರುವ ಮಹಾರಾಜ ಯದುವೀರ್ ಒಡೆಯರ್ ಅವರನ್ನು ಸಂಘದ ನಿಯೋಗ ಭೇಟಿಯಾಗಿ ಪ್ರವಾಸೋದ್ಯಮ ಪ್ರಚಾರಕ್ಕೆ ಸಹಕರಿಸುವಂತೆ ಕೋರಿಕೊಂಡಾಗ ಸಂತೋಷದಿಂದ ಒಪ್ಪಿಕೊಂಡಿದ್ದಾರೆ. ಸಧ್ಯದಲ್ಲಿಯೇ ಕೊಡಗಿನ ಪ್ರವಾಸತಾಣಗಳಿಗೆ ಭೇಟಿ ನೀಡುವ ಭರವಸೆ ದೊರೆತಿದೆ. ದಸರಾ ಉತ್ಸವದ ಬಳಿಕ ಮಳೆಹಾನಿ ಪ್ರದೇಶಗಳ ಸಂತ್ರಸ್ತರನ್ನು ಕಂಡು ತಮ್ಮ ಟ್ರಸ್ಟ್ ಮೂಲಕ ಸಹಾಯ ಹಸ್ತ ಚಾಚುವದಾಗಿ ಯದುವೀರ್ ಒಡೆಯರ್ ಅಭಯ ನೀಡಿರುವದಾಗಿ ನಾಗೇಂದ್ರ ಪ್ರಸಾದ್ ತಿಳಿಸಿದರು.

ಪ್ರಾಕೃತಿಕ ವಿಕೋಪ ಸಂಭವಿಸಿ ಎರಡು ತಿಂಗಳು ಕಳೆಯುತ್ತಾ ಬಂದಿದ್ದರೂ, ಪ್ರವಾಸೋದ್ಯಮ ಇನ್ನೂ ಚೇತರಿಕೆಯನ್ನು ಕಂಡಿಲ್ಲ. ಪ್ರಸ್ತುತÀ ಜಿಲ್ಲೆಯ ಹೊಟೇಲ್, ಹೋಂ ಸ್ಟೇಗಳಲ್ಲಿ 15 ರಿಂದ 20 ಸಾವಿರ ಮಂದಿ ಕಾರ್ಯ ನಿರ್ವಹಿಸುತ್ತಿದ್ದು, ಇವರನ್ನು ಅವಲಂಬಿಸಿ ಲಕ್ಷಕ್ಕೂ ಅಧಿಕ ಮಂದಿ ಇದ್ದಾರೆ. ಪ್ರಸ್ತುತ ಪ್ರವಾಸೋದ್ಯಮದ ನಿರಾಶಾದಾಯಕ ಬೆಳವಣಿಗೆ ಈ ಮಂದಿಯ ಬದುಕನ್ನು ಆತಂಕಕ್ಕೆ ದೂಡಿದೆಯೆಂದು ಅವರು ಕಳವಳ ವ್ಯಕ್ತಪಡಿಸಿದರು.

ಉಸ್ತುವಾರಿ ಸಚಿವರಿಗೆ ಮನವಿ

ಸಂಘದ ನಿಯೋಗ ಪ್ರವಾಸೋದ್ಯಮ ಸಚಿವ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅವರನ್ನು ಭೇಟಿಯಾಗಿ ಕೊಡಗಿನ ಪ್ರವಾಸೋದ್ಯಮ

(ಮೊದಲ ಪುಟದಿಂದ) ನೆಲಕಚ್ಚಿರುವ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ಸಚಿವರು ಸೋಮವಾರ ಮಡಿಕೇರಿಗೆ ಆಗಮಿಸಲಿದ್ದು, ಪ್ರವಾಸೋದ್ಯಮದ ಬೆಳವಣಿಗೆಗೆ ಪೂರಕವಾದ ವಿಚಾರಗಳ ಬಗ್ಗೆ ಚರ್ಚಿಸಲಾಗುವದೆಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಹಲವರ ಬದುಕಿಗೆ ಆಧಾರವಾಗಿರುವ ಪ್ರವಾಸೋದ್ಯಮದ ಉಳಿವಿಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಮಾಡಿಕೊಳ್ಳಲಾಗುತ್ತದೆ. ಕೊಡಗಿನಲ್ಲಿ ಪ್ರವಾಸ ಕೈಗೊಳ್ಳಲು ಯಾವದೇ ಅಡ್ಡಿ ಆತಂಕಗಳಿಲ್ಲವೆಂದು ಸುದ್ದಿಗೋಷ್ಠಿಯ ಮೂಲಕ ನಾಡಿನ ಜನತೆಗೆ ಮನವರಿಕೆ ಮಾಡಿಕೊಡಲು ವಿನಂತಿಸಲಾಗುವ ದೆಂದರು.

ಕೊಡಗಿನಲ್ಲಿ ಸುರಕ್ಷಿತ ಪ್ರವಾಸ ಸಾಧ್ಯವೆಂದು ಜನರಲ್ಲಿ ಅರಿವು ಮೂಡಿಸುವ ಬೈಕ್ ರ್ಯಾಲಿ, ಸೈಕಲ್ ರ್ಯಾಲಿಗಳ ಆಯೋಜನೆಯೊಂದಿಗೆ ಆಹಾರ ಮೇಳವನ್ನೂ ನಡೆಸ ಲಾಗುವದು. ಮಡಿಕೇರಿ ದಸರಾ ಆಚರಣೆ ಮೂಲಕವೂ ಪ್ರವಾಸಿಗರನ್ನು ಸೆಳೆಯುವ ಅನಿವಾರ್ಯತೆ ಇದೆ ಎಂದು ನಾಗೇಂದ್ರ ಪ್ರಸಾದ್ ತಿಳಿಸಿದರು.

ಸಂಘದ ಗೌರವ ಸಲಹೆಗಾರ ಜಿ. ಚಿದ್ವಿಲಾಸ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ವ್ಯಾಪಾರ-ವಾಣಿಜ್ಯೋದ್ಯಮ ಸೇರಿದಂತೆ ಎಲ್ಲ ರೀತಿಯ ಉದ್ಯಮಗಳು ತೀವ್ರ ಸಂಕಷ್ಟದಲ್ಲಿದ್ದು, ಹಲವು ಉದ್ಯಮಗಳು ಮುಚ್ಚಿದ್ದು, ಇನ್ನು ಹಲವರು ಉದ್ಯಮ ಮುಚ್ಚಿ ಹೊರ ಪ್ರದೇಶಗಳಲ್ಲಿ ನೌಕರಿ ಹುಡುಕುವ ಪರಿಸ್ಥಿತಿ ಉಂಟಾಗಿದೆ ಎಂದರು.

ಜಿಲ್ಲೆ ಆರ್ಥಿಕವಾಗಿ 10 ವರ್ಷ ಹಿಂದಕ್ಕೆ ಹೋಗಿದ್ದು, ಬೆಳೆಗಾರರ ಸಂಕಷ್ಟ ಕೂಡ ಹೇಳ ತೀರದಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಯದುವೀರ್ ಅವರನ್ನು ಭೇಟಿಯಾದ ಸಂದರ್ಭ ಅವರು, ಕೊಡಗಿನ ಪ್ರವಾಸೋದ್ಯಮದ ಪುನಶ್ಚೇತನಕ್ಕೆ ಆಸಕ್ತಿ ತೋರಿರುವದಲ್ಲದೆ, ರಾಜವಂಶಸ್ಥರ ಟ್ರಸ್ಟ್ ಮೂಲಕ ಸಂತ್ರಸ್ತರಿಗೆ ನೆರವಿನ ಭರವಸೆಯನ್ನು ನೀಡಿದ್ದಾರೆ ಎಂದರು.

30 ಭಾಷೆಗಳಲ್ಲಿ ಪ್ರಚಾರ

ಪ್ರಾಕೃತಿಕ ವಿಕೋಪಗಳಿಂದ ಮುಕ್ತವಾಗಿ ಕೊಡಗು ಸಹಜ ಸ್ಥಿತಿಯತ್ತ ಮರಳುತ್ತ್ತಿದ್ದು, ಪ್ರವಾಸೋದ್ಯಮ ಸುರಕ್ಷಿತವಾಗಿದೆ. ಕೊಡಗಿಗೆ ಪ್ರವಾಸಿಗರು ಆಗಮಿಸಬಹುದು ಎನ್ನುವ ಸಂದೇಶ ಸಾರುವ 30 ಭಾಷೆಗಳಲ್ಲಿ ಸಿದ್ಧಪಡಿಸಲಾಗಿರುವ ಧ್ವನಿ ಮುದ್ರಿಕೆಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ಮುಟ್ಟಿಸುವ ಪ್ರಯತ್ನಕ್ಕೆ ಸಂಘ ಮುಂದಾಗಿದೆ ಎಂದು ಚಿದ್ವಿಲಾಸ್ ತಿಳಿಸಿದರು.

ಕೊಡಗಿನ ಪ್ರವಾಸೋದ್ಯಮ ಸುರಕ್ಷಿತವಾಗಿರುವುದನ್ನು ಪ್ರತಿಬಿಂಬಿಸುವ ಮತ್ತು ಪ್ರವಾಸಿಗರನ್ನು ಮತ್ತೆ ಕೊಡಗಿಗೆ ಆಕರ್ಷಿಸುವದಕ್ಕೆ ಪೂರಕವಾದ 1 ನಿಮಿಷ, 45 ಸೆಕೆಂಡ್, 30 ಸೆಕೆಂಡ್ ಹೀಗೆ ವಿವಿಧ ಕಿರುಚಿತ್ರಗಳನ್ನು ಹಿರಿಯ ಪತ್ರಕರ್ತ ಹೆಚ್.ಟಿ. ಅನಿಲ್ ಅವರ ಸಹಕಾರದೊಂದಿಗೆ ನಿರ್ಮಿಸಿ ಪ್ರಚಾರಕ್ಕೆ ಒತ್ತು ನೀಡುವ ಕಾರ್ಯ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಪ್ರವಾಸೋದ್ಯಮ ಕಾನೂನು ಬಾಹಿರವಲ್ಲ

ಎಲ್ಲಾ ಕ್ಷೇತ್ರಗಳಂತೆ ಪ್ರವಾಸೋದ್ಯಮವೂ ಒಂದು ಉದ್ಯೋಗ ಸೃಷ್ಟಿಯ ಕ್ಷೇತ್ರವಾಗಿದೆ. ಪ್ರಾಕೃತಿಕ ವಿಕೋಪದಿಂದÀ ಕೊಡಗು

ಸುರಕ್ಷಿತವಾಗಿದೆ. ಕೊಡಗಿಗೆ ಪ್ರವಾಸಿಗರು ಆಗಮಿಸಬಹುದು ಎನ್ನುವ ಸಂದೇಶ ಸಾರುವ 30 ಭಾಷೆಗಳಲ್ಲಿ ಸಿದ್ಧಪಡಿಸಲಾಗಿರುವ ಧ್ವನಿ ಮುದ್ರಿಕೆಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ಮುಟ್ಟಿಸುವ ಪ್ರಯತ್ನಕ್ಕೆ ಸಂಘ ಮುಂದಾಗಿದೆ ಎಂದು ಚಿದ್ವಿಲಾಸ್ ತಿಳಿಸಿದರು.

ಕೊಡಗಿನ ಪ್ರವಾಸೋದ್ಯಮ ಸುರಕ್ಷಿತವಾಗಿರುವುದನ್ನು ಪ್ರತಿಬಿಂಬಿಸುವ ಮತ್ತು ಪ್ರವಾಸಿಗರನ್ನು ಮತ್ತೆ ಕೊಡಗಿಗೆ ಆಕರ್ಷಿಸುವದಕ್ಕೆ ಪೂರಕವಾದ 1 ನಿಮಿಷ, 45 ಸೆಕೆಂಡ್, 30 ಸೆಕೆಂಡ್ ಹೀಗೆ ವಿವಿಧ ಕಿರುಚಿತ್ರಗಳನ್ನು ಹಿರಿಯ ಪತ್ರಕರ್ತ ಹೆಚ್.ಟಿ. ಅನಿಲ್ ಅವರ ಸಹಕಾರದೊಂದಿಗೆ ನಿರ್ಮಿಸಿ ಪ್ರಚಾರಕ್ಕೆ ಒತ್ತು ನೀಡುವ ಕಾರ್ಯ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಪ್ರವಾಸೋದ್ಯಮ ಕಾನೂನು ಬಾಹಿರವಲ್ಲ

ಎಲ್ಲಾ ಕ್ಷೇತ್ರಗಳಂತೆ ಪ್ರವಾಸೋದ್ಯಮವೂ ಒಂದು ಉದ್ಯೋಗ ಸೃಷ್ಟಿಯ ಕ್ಷೇತ್ರವಾಗಿದೆ. ಪ್ರಾಕೃತಿಕ ವಿಕೋಪದಿಂದÀ ಕೊಡಗು ದುರಂತವಾಯಿತು ಎನ್ನುವದು ಅವೈಜ್ಞಾನಿಕವಾಗಿ ಸರಿಯಲ್ಲ ಎನ್ನುವದನ್ನು ಪ್ರವಾಸಿಗರ ಆಗಮನವನ್ನು ವಿರೋಧಿಸುವವರು ಅರ್ಥ ಮಾಡಿಕೊಳ್ಳಬೇಕೆಂದರು. ಸುಸ್ಥಿರ, ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಸಂಘ ಒತ್ತಿಕೊಡುವದಲ್ಲದೆ, ಮುಂಬರುವ ಪ್ರವಾಸಿಗರು ದುರಂತ ಸ್ಥಳಗಳಿಗೆ ತೆರಳದಂತೆ ಫಲಕಗಳನ್ನು ಎಲ್ಲ ವಸತಿ ಕೇಂದ್ರಗಳೂ ಅಳವಡಿಸುವಂತೆ ಚಿದ್ವಿಲಾಸ್ ಸೂಚಿಸಿದರು.

ಕೆಎಸ್‍ಟಿಡಿಸಿ ಮೂಲಕ ಕೊಡಗಿನ ಪ್ರವಾಸಕ್ಕೆ ಒತ್ತು ನೀಡುವ ವಿಶೇಷ ಪ್ಯಾಕೇಜ್ ಆರಂಭಿಸುವಂತೆ ಪ್ರವಾಸೋದ್ಯಮ ಸಚಿವರು ಹಾಗೂ ಉಸ್ತುವಾರಿ ಸಚಿವರಾದ ಸಾ.ರಾ.ಮಹೇಶ್ ಅವರಲ್ಲಿ ಮನವಿ ಮಾಡಿಕೊಳ್ಳಲಾಗುವದೆಂದು

ತಿಳಿಸಿದರು.

ಧ್ವನಿ ಮುದ್ರಣ ಬಿಡುಗಡೆ

ಇದೇ ಸಂದರ್ಭ ಕೊಡಗಿನ ಪ್ರವಾಸ ಸುರಕ್ಷಿತ ಎನ್ನುವ ಬಗ್ಗೆ ಜನರಿಗೆ ಮನದಟ್ಟು ಮಾಡಿಕೊಡುವ ಮಹಾರಾಜ ಯದುವೀರ್ ಒಡೆಯರ್ ಅವರ ಧ್ವನಿ ಮುದ್ರಿಕೆಯ ಸಿಡಿಯನ್ನು ಸಂಘದ ಪದಾಧಿಕಾರಿಗಳು ಬಿಡುಗಡೆ ಮಾಡಿದರು. ಇದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡಲಾಗುವದೆಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಜಹೀರ್ ಅಹಮ್ಮದ್, ಖಜಾಂಚಿ ಭಾಸ್ಕರ್, ಪ್ರಧಾನ ಕಾರ್ಯದರ್ಶಿ ನಾಸಿರ್ ಹಾಗೂ ಅಂಬೆಕಲ್ ನವೀನ್ ಕುಶಾಲಪ್ಪ, ಸಂಘದ ಪದಾಧಿಕಾರಿಗಳಾದ ದಿನೇಶ್, ಬಶೀರ್ ಈ ಸಂದರ್ಭ ಹಾಜರಿದ್ದರು.