ಕೂಡಿಗೆ, ಅ. 5: ಕೂಡಿಗೆ ಗ್ರಾಮ ಪಂಚಾಯಿತಿಯ ಮದಲಾಪುರ ಗ್ರಾಮದಲ್ಲಿರುವ ನಾಲ್ಕನೇ ತೂಬಿನ ಉಪ ವಿಭಾಗದ ತೂಬು ಮುಖ್ಯ ನಾಲೆಯಲ್ಲಿ ಕುಸಿತ ಗೊಂಡಿರುವದರಿಂದ ನೀರಿನ ಹರಿವಿಕೆ ಇಲ್ಲದೆ, ಕೆಳಭಾಗದಲ್ಲಿ ರೈತರು ಬೆಳೆದ ಭತ್ತದ ಗದ್ದೆಗಳಿಗೆ ನೀರು ಸ್ಥಗಿತಗೊಂಡಿದೆ. ಇದರಿಂದಾಗಿ ಈ ಭಾಗದ 25 ಹೆಕ್ಟೇರ್‍ಗೂ ಹೆಚ್ಚು ಪ್ರದೇಶದ ಭತ್ತದ ಬೆಳೆಯು ಒಣಗುತ್ತಿದೆ. ಸಂಬಂಧಪಟ್ಟ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮುಖ್ಯ ನಾಲೆಯ ನೀರಿನ ಹರಿವಿಕೆಯನ್ನು ಕಡಿಮೆಗೊಳಿಸಿ ಜಖಂಗೊಂಡಿರುವ ತೂಬನ್ನು ಸರಿಪಡಿಸಿ ರೈತರ ಬೆಳೆಗಳಿಗೆ ನೀರೊದಗಿಸಬೇಕು ಎಂದು ಈ ವ್ಯಾಪ್ತಿಯ ರೈತರು ಒತ್ತಾಯಿಸಿದ್ದಾರೆ.