ಮಡಿಕೇರಿ, ಅ. 5: ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘದ 2017-18ನೇ ಸಾಲಿನ ಮಹಾಸಭೆ ಮತ್ತು ಪ್ರಕೃತಿ ವಿಕೋಪದಲ್ಲಿ ಹಾಳಾಗಿರುವ ಮಾಜಿ ಸೈನಿಕರ ಕುಟುಂಬಕ್ಕೆ ಸಹಾಯಧನ ನೀಡುವ ಕಾರ್ಯಕ್ರಮವನ್ನು ತಾ. 28 ಹಗಲು 10 ಗಂಟೆಗೆ ಸಂಘದ ಅಧ್ಯಕ್ಷ ಮೇಜರ್ ಜನರಲ್ ಬಿ.ಎ. ಕಾರ್ಯಪ್ಪ (ನಿವೃತ್ತ) ಅಧ್ಯಕ್ಷತೆಯಲ್ಲಿ ಮಡಿಕೇರಿ ಸರಕಾರಿ ಬಸ್ ನಿಲ್ದಾಣದ ಬಳಿ ಇರುವ ಹೊಟೇಲ್ ಸಮುದ್ರದಲ್ಲಿ ನಡೆಸುವದಾಗಿ ತೀರ್ಮಾನಿಸಲಾಗಿದೆ.
ಈ ಸಭೆಗೆ ಕೊಡಗು ಜಿಲ್ಲೆಯ ಎಲ್ಲಾ ಮಾಜಿ ಸೈನಿಕರು, ಮೃತರ ಪತ್ನಿಯರು ಹಾಜರಾಗಬೇಕಾಗಿ ಸಂಘದ ಕಾರ್ಯದರ್ಶಿ ಮೇಜರ್ ಓ.ಎಸ್. ಚಿಂಗಪ್ಪ ತಿಳಿಸಿದ್ದಾರೆ. ಅಲ್ಲದೆ 9845331431ರಲ್ಲಿ ಸಂಪರ್ಕಿಸಲು ಸಲಹೆ ನೀಡಿದ್ದಾರೆ.