ಮಡಿಕೇರಿ, ಅ. 5: ಇತ್ತೀಚೆಗೆ ಭಾರೀ ಮಳೆಯಿಂದ ಮಡಿಕೇರಿಯ ಚಿತ್ತಾರ ದೃಶ್ಯವಾಹಿನಿ ಕಚೇರಿಯಲ್ಲಿ ಹಾನಿಯಾಗಿತ್ತು. ಕ್ಯಾಮರಾ, ಕಂಪ್ಯೂಟರ್‍ಗಳು ಹಾಗೂ ದಾಖಲೆಗಳು ನಾಶವಾಗಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ಬಷೀರ್ ಕೆಟಿಎಸ್ ಅವರ ಮನವಿ ಮೇರೆಗೆ ಸಚಿವ ಜಮೀರ್ ಅಹಮದ್ ಚಿತ್ತಾರಕ್ಕೆ ವೈಯಕ್ತಿಕವಾಗಿ 1 ಲಕ್ಷ ರೂಪಾಯಿ ನೆರವು ನೀಡಿದರು. ಚಿತ್ತಾರ ವ್ಯವಸ್ಥಾಪಕ ನಿರ್ದೇಶಕಿ ಬಿ.ಆರ್. ಸವಿತಾ ರೈ ನೆರವು ಸ್ವೀಕರಿಸಿದರು.
ಸಚಿವರು 2ನೇ ಮೊಣ್ಣಂಗೇರಿ, ಜೋಡುಪಾಲ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಿ, ಸಂತ್ರಸ್ತರ ಅಹವಾಲು ಆಲಿಸಿದರು. ಈ ವೇಳೆ ಕೆಪಿಸಿಸಿ ಕಾರ್ಯದರ್ಶಿ ಟಿ.ಎಂ. ಶಹೀದ್, ಕಾಂಗ್ರೆಸ್ ಮುಖಂಡ ಬಷೀರ್ ಕೆಟಿಎಸ್ ಮತ್ತಿತರರು ಹಾಜರಿದ್ದರು.