ಗುಡ್ಡೆಹೊಸೂರು, ಅ. 5: ಇಲ್ಲಿನ ಗ್ರಾಮ.ಪಂಚಾಯ್ತಿಯ ಗ್ರಾಮ ಸಭೆಯು ಪಂಚಾಯ್ತಿ ಅಧ್ಯಕೆÀ್ಷ À ಕೆ.ಎಸ್. ಭಾರತಿ ಅಧ್ಯಕ್ಷತೆಯಲ್ಲಿ ಇಲ್ಲಿನ ಸಮುದಾಯ ಭವನದಲ್ಲಿ ನಡೆಯಿತು. ಸಭೆಯಲ್ಲಿ ನೋಡಲ್ ಅಧಿಕಾರಿ ಕಾವ್ಯ ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಎಂ. ಲತೀಫ್, ಮತ್ತು ತಾಲೂಕು ಪಂಚಾಯ್ತಿ ಸದಸ್ಯರಾದ ಪುಷ್ಪ, ವಿಜುಚಂಗಪ್ಪ ಹಾಗೂ ಗ್ರಾ.ಪಂ. ಉಪಾಧ್ಯಕ್ಷೆ ಲೀಲಾವತಿ ಮತ್ತು ಸರ್ವ ಸದಸ್ಯರು ಹಾಜರಿದ್ದರು. ಈ ಸಂದರ್ಭ ಪಿ.ಡಿ.ಓ. ಶ್ಯಾಂ ಗ್ರಾಮದ ಅಭಿವೃದ್ಧಿಯ ಕಾಮಗಾರಿಗಳ ಪಟ್ಟಿಯನ್ನು ಸಭೆಯ ಗಮನಕ್ಕೆ ತಂದರು. ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದು ತಮ್ಮ ಇಲಾಖೆ ವತಿಯಿಂದ ಗ್ರಾಮಸ್ಥರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಮುಖ್ಯವಾಗಿ ಕೃಷಿಇಲಾಖೆ, ಪಶುಸಂಗೋಪನಾ ಇಲಾಖೆ, ತೋಟಗಾರಿಕೆ, ಕಂದಾಯ, ಶಿಕ್ಷಣ, ಹೀಗೆ ಹಲವಾರು ಇಲಾಖಾಧಿಕಾರಿಗಳಿಂದ ಮಾಹಿತಿ ನೀಡಲಾಯಿತು. ಈ ಸಂದರ್ಭ ಸುಮಾರು 200ಕ್ಕೂ ಹೆಚ್ಚು ಗ್ರಾಮಸ್ಥರು ಹಾಜರಿದ್ದರು. ಗುಡ್ಡೆಹೊಸೂರಿನಲ್ಲಿ ಪಶುಸಂಗೋಪನೆ ಇಲಾಖಾ ವತಿಯಿಂದ ಕಟ್ಟಡ ನಿರ್ಮಿಸಿ ಹಲವಾರು ವರ್ಷ ಕಳೆಯಿತು. ಆದರೆ ಕಟ್ಟಡ ಖಾಲಿ ಇದೆ ಗ್ರಾಮಕ್ಕೆ ಪಶುವೈದ್ಯರ ಅವಶ್ಯಕತೆ ಇದೆ. ಪಶುವೈದ್ಯರನ್ನು ಗ್ರಾಮಸ್ಥರು ಕುಶಾಲನಗರದಿಂದ ಕರೆತಂದು ತಮ್ಮ ಜಾನುವಾರುಗಳಿಗೆ ಚಿಕಿತ್ಸೆಕೊಡಿಸಬೇಕು ಎಂದು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ನೀರಾವರಿ ಮತ್ತು ಸೆಸ್ಕ್ ಅಧಿಕಾರಿಗಳನ್ನು ಕೂಡ ಸಾರ್ವಜನಿಕರು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. ಅಧಿಕಾರಿಗಳು ತಮ್ಮ ಇಲಾಖಾ ಮಾಹಿತಿ ನೀಡಿ ಸಭೆಯಿಂದ ನಿರ್ಗಮಿಸುತ್ತಿದ್ದ ಸಂದರ್ಭ ಕಾಟಾಚಾರಕ್ಕೆ ಸಭೆಗೆ ಏಕೆ ಬರುತ್ತೀರಿ ಎಂದು ಪ್ರಶ್ನಿಸಿ ಸಭೆಯಿಂದ ತೆರಳದಂತೆ ಗ್ರಾಮಸ್ಥರು ಕ್ರಮ ಕೈಗೊಂಡರು. ಇಲಾಖೆಗಳಲ್ಲಿರುವ ಸಮಸ್ಯೆಗಳ ಬಗ್ಗೆ ಮುಂದಿನ ದಿನಗಳಲ್ಲಿ ಸರಿಪಡಿಸುವದಾಗಿ ಅಧಿಕಾರಿಗಳು ಸಭೆಗೆ ಭರವಸೆ ನೀಡಿದರು. ಗ್ರಾಮಸ್ಥರ ಜಾನುವಾರುಗಳಿಗೆ ಚಿಕಿತ್ಸೆಕೊಡಿಸಬೇಕು ಎಂದು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ನೀರಾವರಿ ಮತ್ತು ಸೆಸ್ಕ್ ಅಧಿಕಾರಿಗಳನ್ನು ಕೂಡ ಸಾರ್ವಜನಿಕರು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. ಅಧಿಕಾರಿಗಳು ತಮ್ಮ ಇಲಾಖಾ ಮಾಹಿತಿ ನೀಡಿ ಸಭೆಯಿಂದ ನಿರ್ಗಮಿಸುತ್ತಿದ್ದ ಸಂದರ್ಭ ಕಾಟಾಚಾರಕ್ಕೆ ಸಭೆಗೆ ಏಕೆ ಬರುತ್ತೀರಿ ಎಂದು ಪ್ರಶ್ನಿಸಿ ಸಭೆಯಿಂದ ತೆರಳದಂತೆ ಗ್ರಾಮಸ್ಥರು ಕ್ರಮ ಕೈಗೊಂಡರು. ಇಲಾಖೆಗಳಲ್ಲಿರುವ ಸಮಸ್ಯೆಗಳ ಬಗ್ಗೆ ಮುಂದಿನ ದಿನಗಳಲ್ಲಿ ಸರಿಪಡಿಸುವದಾಗಿ ಅಧಿಕಾರಿಗಳು ಸಭೆಗೆ ಭರವಸೆ ನೀಡಿದರು.