ವೀರಾಜಪೇಟೆ, ಅ.4: ಮಲಬಾರ್ ರಸ್ತೆಯ ಮೀನುಪೇಟೆ ಮಸ್ಜಿದುನ್ನೂರ್ ಆಶ್ರಯದಲ್ಲಿ ತಾ. 5 ರಂದು (ಇಂದು) ರಾತ್ರಿ ಮಗ್ರಿಬ್ ನಮಾಝ್ ನಂತರ ಮಜ್ಲಿಸುನ್ನೂರ್ ಹಾಗೂ ದುಆ ಮಜ್ಲಿಸ್ ನಡೆಯಲಿದೆ. ರಾತ್ರಿ 8.30 ಗಂಟೆಗೆ ಮುಹಮ್ಮದ್ ಅಲಿ ಫೈಝಿ ವಯನಾಡ್ ಇವರಿಂದ ಧಾರ್ಮಿಕ ಪ್ರವಚನ ಏರ್ಪಡಿಸಲಾಗಿದೆ. ಮಹಿಳೆಯರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆಯೆಂದು ಮಸ್ಜಿದುನ್ನೂರ್ ಆಡಳಿತ ಮಂಡಳಿ ಯವರು ತಿಳಿಸಿದ್ದಾರೆ.