ಮಡಿಕೇರಿ, ಅ. 4: ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಸಂಕೀರ್ಣ ಟ್ರಸ್ಟ್‍ನ ಮಹಾಸಭೆಯು ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಸಂಕೀರ್ಣ ಟ್ರಸ್ಟ್‍ನ ಸಭಾಂಗಣದಲ್ಲಿ ಅಧ್ಯಕ್ಷ ಬಿ.ಟಿ. ತಿಮ್ಮಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದು ಮುಂದಿನ ಸಾಲಿನ ಆಡಳಿತ ಮಂಡಳಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು.ಅಧ್ಯಕ್ಷರಾಗಿ ಕಾಡ್ಯಮಾಡ ಬಿ. ಗಿರೀಶ್ ಗಣಪತಿ, ಉಪಾಧ್ಯಕ್ಷರಾಗಿ ಎಂ.ಇ. ಅಬ್ದುಲ್ ರಹಿಮಾನ್, ಕಾರ್ಯದರ್ಶಿಯಾಗಿ ಕೆ.ಕೆ. ಶ್ರೀನಿವಾಸ್, ಖಜಾಂಚಿಯಾಗಿ ಹೆಚ್.ಸಿ. ಯತೀಶ್ ಕುಮಾರ್ ಆಯ್ಕೆಯಾಗಿದ್ದಾರೆ.