*ಗೋಣಿಕೊಪ್ಪಲು, ಅ. 4: ವನವಾಸಿ ಕಲ್ಯಾಣದ ವತಿಯಿಂದ ಬಾಳೆಲೆ ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ತಾ. 7 ರಂದು ಜಿಲ್ಲಾ ಮಟ್ಟದ ವನವಾಸಿ ಗಿರಿಜನ ಕ್ರೀಡಾ ಕೂಟ ನಡೆಯಲಿದೆ.
ಬೆಳಿಗ್ಗೆ 10.30 ರಿಂದ ಆರಂಭಗೊಳ್ಳಲಿರುವ ಕ್ರೀಡಾಕೂಟದಲ್ಲಿ ಉದ್ದ ಜಿಗಿತ, ಭಾರದ ಗುಂಡು ಎಸೆತ, ಓಟದ ಸ್ಪರ್ಧೆ, ಬಿಲ್ವಿದ್ಯೆ ನಡೆಯಲಿದೆ. ಜೂನಿಯರ್, ಸಬ್ ಜೂನಿಯರ್, ಸೀನಿಯರ್ ಹಾಗೂ ಮಹಿಳೆ ಮತ್ತು ಪುರುಷ ಎಂಬ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ. ಪುರುಷ ಮತ್ತು ಮಹಿಳೆ ಮ್ಯಾರಾಥಾನ್ ಓಟ ನಡೆಯಲಿದ್ದು ಪುರುಷರಿಗೆ 21 ಕಿಮೀ, ಮಹಿಳೆಯರಿಗೆ 14 ಕಿಮೀ ದೂರದ ಓಟದ ಸ್ಪರ್ಧೆ ಎರ್ಪಡಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಕ್ರೀಡೆಯಲ್ಲಿ ಪಾಲ್ಗೊಳ್ಳುವ ಗಿರಿಜನರು ಇತ್ತೀಚಿನ ಭಾವಚಿತ್ರ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಜಾತಿ ಪ್ರಮಾಣ ಪತ್ರ ಹಾಗೂ ಜನ್ಮದಿನಾಂಕದ ದೃಢೀಕರಣ ಪತ್ರದ ನಕಲು ಪ್ರತಿಗಳನ್ನು ನೀಡಬೇಕು ಎಂದು ತಿಳಿಸಿದ್ದಾರೆ.
 
						