ಚೆಟ್ಟಳ್ಳಿ, ಅ. 4: ಮಹಾ ಮಳೆಗೆ ತತ್ತರಿಸಿ ಹೋದ ಕಾಲೂರು ಗ್ರಾಮದಲ್ಲಿ ಕಳೆದ ಹನ್ನೊಂದು ವರ್ಷದ ಹಿಂದೆ ಮರದಿಂದ ಬಿದ್ದು ತನ್ನ ಸೊಂಟದಿಂದ ಕೆಳಭಾಗದ ಸ್ವಾದೀನ ಕಳೆದು ಕೊಂಡ ಚೆನ್ನಪಂಡ ಪಿ. ಪೂಣಚ್ಚ ಅವರಿಗೆ ಬಾಳೆಲೆಯ ಲಯನ್ಸ್ ಕ್ಲಬ್ಬಿನ ಪದಾಧಿಕಾರಿ ಪಾರುವಂಗಡ ಮಿಲನ್ ಹಾಗೂ ದೇವಿಕಾ ದಂಪತಿಗಳು ಗಾಲಿ ಕುರ್ಚಿ, ವಾಟರ್ ಬೆಡ್ಡನ್ನು ನೀಡಿ ಉಪಚರಿಸಿದರು.
ಚೆನ್ನಪಂಡ ಪೂಣಚ್ಚ ಮಾತನಾಡಿ, ಮಹಾ ಮಳೆಗೆ ತನ್ನ ತೋಟ, ಗದ್ದೆ ಎಲ್ಲ ಕೊಚ್ಚಿ ಹೋಗಿದ್ದು, ತನಗೆ ವಯಸ್ಸಾದ ತಂದೆ-ತಾಯಿ, ಹೆಂಡತಿ ಇಬ್ಬರು ಮಕ್ಕಳು ಇದ್ದು, ಹೆಂಡತಿ ತೋಟದಲ್ಲಿ ಹಾಗೂ ಗದ್ದೆಯಲ್ಲಿ ದುಡಿದು ತಮ್ಮನ್ನು ಸಲಹುತ್ತಿದ್ದಳು. ಒಬ್ಬಳು ದುಡಿದರೆ ಊಟಕ್ಕೆ ಆರು ಜನರು ಇದ್ದರು. ಈಗಿನ ಪರಿಸ್ಥಿತಿಯಲ್ಲಿ ಎಲ್ಲರೂ ಉಪವಾಸ ಬೀಳುವ ಹಂತದಲ್ಲಿ ಇರುವಾಗ ಈ ರೀತಿಯ ಸಹಾಯ ದೊರೆಯುತ್ತಿದೆ ಎಂದರು.
ಚೆಪ್ಪುಡೀರ ಗೀತಾ, ನೀಲ ಸೋಮಣ್ಣ ಉಪಸ್ಥಿತರಿದ್ದರು.
 
						