ಸೋಮವಾರಪೇಟೆ, ಅ.4: ಇಲ್ಲಿನ ಲಯನ್ಸ್ ಕ್ಲಬ್ ಹಾಗೂ ಮಂಗಳೂರಿನ ಡೆಲ್ಟಾ ಕಣ್ಣಿನ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಜ್ಞಾನ ವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಲಯನ್ಸ್ ವಲಯಾಧ್ಯಕ್ಷ ಎ.ಎಸ್. ಮಹೇಶ್ ಮಾತನಾಡಿ, ಮಾನವನಿಗೆ ಕಣ್ಣು ಅತಿ ಮುಖ್ಯವಾದ ಅಂಗವಾಗಿದ್ದು, ಇದರ ಸಂರಕ್ಷಣೆ ಅಗತ್ಯ. ಸೂಕ್ತ ಸಮಯದಲ್ಲಿ ನೇತ್ರ ತಜ್ಞರೊಂದಿಗೆ ತಪಾಸಣೆ ನಡೆಸಿ ಚಿಕಿತ್ಸೆ ಪಡೆದುಕೊಳ್ಳಬೇಕೆಂದರು.
ಸೋಮವಾರಪೇಟೆ ಲಯನ್ಸ್ ಅಧ್ಯಕ್ಷ ಯೋಗೇಶ್, ಕಾರ್ಯದರ್ಶಿ ಮಂಜುನಾಥ್ ಚೌಟ, ಪದಾಧಿಕಾರಿಗಳಾದ ವರದರಾಜ್ ಅರಸ್, ವಿಜೇಂದ್ರ, ಶಶಿಕಲಾ ಮಂಜುನಾಥ್, ಶಾಲಾ ಮುಖ್ಯ ಶಿಕ್ಷಕಿ ಎನ್. ಪಾರ್ವತಿ ಅವರುಗಳು ಉಪಸ್ಥಿತರಿದ್ದರು.
ಮಂಗಳೂರಿನ ಡೆಲ್ಟಾ ಕಣ್ಣಿನ ಆಸ್ಪತ್ರೆಯ ಕುಮಾರ್, ಜಯಲಕ್ಷ್ಮೀ, ಶಿಲ್ಪ, ಪ್ರಜ್ವಲ್ ನೇತ್ರ ತಪಾಸಣೆ ಮಾಡಿದರು.
 
						