ಮಡಿಕೇರಿ, ಅ. 3: ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೋವರ್ಸ್ ಮತ್ತು ರೇಂಜರ್ಸ್‍ಗಳಿಗೆ ಧೀಕ್ಷೆ ಸಮಾರಂಭ ಏರ್ಪಡಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿದ್ದ ಸಂತ ಅನ್ನಮ್ಮ ಶಾಲೆ ಮುಖ್ಯೋಪಾಧ್ಯಾಯಿನಿ ಮಾರ್ಗರೇಟ್ ಲಸ್ರಾದೊ ಮಾತನಾಡಿ, ರೋವರ್ಸ್‍ಗಳು ಸೇವೆಯಲ್ಲಿ ತೊಡಗಿಕೊಳ್ಳಬೇಕು. ಕೈಯಲ್ಲಿ ಐದು ಬೆರಳುಗಳು ಬೇರೆ ಬೇರೆ ರೀತಿಯಲ್ಲಿ ಇರುವಂತೆ ಸಮಾಜದಲ್ಲಿ ವಿವಿಧ ರೀತಿಯ ಜನರಿರುತ್ತಾರೆ ಅವರ ಆಲೋಚನೆ-ಅಭಿರುಚಿ ಬೇರೆ ಇರುತ್ತದೆ. ಅದಕ್ಕೆ ತಕ್ಕಂತೆ ಎಲ್ಲಾರನ್ನು ಒಂದುಗೂಡಿಸಿ ಮುಂದೆ ನಡೆದರೆ ಭಾವೈಕ್ಯತೆಯೊಂದಿಗೆ ಏಕತೆ ಸಾಧಿಸಲು ಸಾಧ್ಯವಾಗುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಬೋಪಯ್ಯ ಮಾತನಾಡಿ, ರೋವರ್ಸ್‍ಗಳು ಪ್ರಕೃತಿ ವಿಕೋಪ ಸಂದರ್ಭದಲ್ಲಿ ಜನರ ಸೇವೆಗೆ ಸದಾ ಸಿದ್ಧರಿರಬೇಕು ಎಂದು ತಿಳಿಸಿದರು. ಅತಿಥಿಯಾಗಿ ಭಾಗವಹಿಸಿದ್ದ ಯುವರಾಜ್ ಕೃಷ್ಣ ರೋವರ್ಸ್-ರೇಂಜರ್ಸ್ ಸೇವೆಯನ್ನು ಮೆಚ್ಚಿ ಪ್ರಶಸ್ತಿ ಪತ್ರ ವಿತರಿಸಿದರು. ಕಾಲೇಜಿನ ರೋವರ್ಸ್ ಅಧಿಕಾರಿ ಎಂ.ಎನ್. ವನಿತ್ ಕುಮಾರ್ ಬ್ಯಾಡ್ಜ್‍ನ ಮಹತ್ವದ ಬಗ್ಗೆ ತಿಳಿಸಿ, ಸ್ವಾಗತಿಸಿದರು. ನೇತ್ರ ನಿರೂಪಿಸಿದರು. ವಿದ್ಯಾರ್ಥಿ ಶೋಭಿತ ವಂದಿಸಿದರು.