ಮಡಿಕೇರಿ, ಅ. 3: 64ನೇ ವನ್ಯಜೀವಿ ಸಪ್ತಾಹ ಆಚರಣೆ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ. ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಅರಣ್ಯ ವನ್ಯಜೀವಿ ಮತ್ತು ಜೀವಿ ವೈವಿಧ್ಯತೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಕೊಡಗಿನ ಮೂರು ತಾಲೂಕು ಮಟ್ಟದ ಸ್ಪರ್ಧೆಗಳನ್ನು ಪ್ರತ್ಯೇಕವಾಗಿ ತಾ. 5ರಂದು ಈ ಕೆಳಗಿನ ಸ್ಥಳಗಳಲ್ಲಿ ಆಯೋಜಿಸಲಾಗಿದೆ. ಪ್ರಬಂಧ ಸ್ಪರ್ಧೆ : ಸಮಯ: ಬೆಳಿಗ್ಗೆ 10.30 ರಿಂದ 11.30ರವರೆಗೆ.

ಪ್ರೌಢಶಾಲೆ ವಿಭಾಗ - ವಿಷಯ : ಪರಿಸರ ಸಮತೋಲನದಲ್ಲಿ ವನ್ಯಜೀವಿಗಳ ಪಾತ್ರ

ಪಿ.ಯು.ಸಿ. ವಿಭಾಗ - ವಿಷಯ: ಮಾನವ ಮತ್ತು ವನ್ಯಪ್ರಾಣಿ ಸಂಘರ್ಷ ನಿಯಂತ್ರಿಸಲು ಸ್ಥಳೀಯರ ಪಾತ್ರ.

ಚಿತ್ರಕಲೆ ಸ್ಪರ್ಧೆ- ಸಮಯ: ಬೆಳಿಗ್ಗೆ 12.00ರಿಂದ 1ರವರೆಗೆ.

ಕಿರಿಯ ಪ್ರಾಥಮಿಕ ಶಾಲೆ - ವಿಷಯ : ಪ್ರಕೃತಿ ಮತ್ತು ವನ್ಯಜೀವಿ

ಹಿರಿಯ ಪ್ರಾಥಮಿಕ ಶಾಲೆ - ವಿಷಯ : ಪ್ರಕೃತಿ ಮತ್ತು ವನ್ಯಜೀವಿ

ಲಿಖಿತ ರಸಪ್ರಶ್ನೆ- ಸಮಯ : ಮಧ್ಯಾಹ್ನ 2ರಿಂದ 3ರವರೆಗೆ

ಪ್ರೌಢಶಾಲೆ ವಿಭಾಗ - ವಿಷಯ: ಅರಣ್ಯ ಮತ್ತು ವನ್ಯಜೀವಿ

ಪಿಯುಸಿ ವಿಭಾಗ - ವಿಷಯ : ಅರಣ್ಯ ಮತ್ತು ವನ್ಯಜೀವಿ

ಮಡಿಕೇರಿ ತಾಲೂಕಿಗೆ ಸರ್ಕಾರಿ ಪದವಿಪೂರ್ವ ಕಾಲೇಜು, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸಭಾಂಗಣ, ಮಡಿಕೇರಿ.

ಸೋಮವಾರಪೇಟೆ ತಾಲೂಕಿಗೆ ಮಾದರಿ ಪ್ರಾಥಮಿಕ ಶಾಲೆ, ಶ್ರೀ ಚೆನ್ನಬಸಪ್ಪ ಸಭಾಂಗಣ, ಸೋಮವಾರಪೇಟೆ. ವೀರಾಜಪೇಟೆಗೆ ಸರ್ಕಾರಿ ಪ್ರಾಥಮಿಕ ಶಾಲೆ, ಪೊನ್ನಂಪೇಟೆಯಲ್ಲಿ ಸ್ಪರ್ಧೆ ನಡೆಯಲಿದೆ.

ಸ್ಪರ್ಧೆಗಳಿಗೆ ಆಸಕ್ತ ವಿದ್ಯಾರ್ಥಿಗಳು ಹೆಸರುಗಳನ್ನು ಸ್ಪರ್ಧೆ ನಡೆಯುವ ದಿನ ಬೆಳಿಗ್ಗೆ 10 ಗಂಟೆಯಿಂದ 10.30 ಗಂಟೆಯವರೆಗೆ ನೋಂದಾಯಿಸಬಹುದಾಗಿರುತ್ತದೆ. ಚಿತ್ರಕಲಾ ಸ್ಪರ್ಧೆಗಳಿಗೆ ಚಿತ್ರ ಬರೆಯುವ ಹಾಳೆಗಳು ಮಾತ್ರ ಇಲಾಖಾ ವತಿಯಿಂದ ನೀಡಲಾಗುವದು.

ಹೆಚ್ಚಿನ ಮಾಹಿತಿಗಾಗಿ ಡಿ.ಎಸ್. ದಯಾನಂದ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ದೂರವಾಣಿ ಸಂಖ್ಯೆ: 9448408742) ಶ್ರೀನಿವಾಸ ನಾಯಕ್, ವಲಯ ಅರಣ್ಯಾಧಿಕಾರಿ (ದೂ.ಸಂ: 9663315823)ಮರಿಸ್ವಾಮಿ ಕೆ.ಎಂ., ವಲಯ ಅರಣ್ಯಾಧಿಕಾರಿ (ದೂ.ಸಂ: 9611854217) ವೀರೇಂದ್ರ, ವಲಯ ಅರಣ್ಯಾಧಿಕಾರಿ (ದೂ.ಸಂ: 9611758153.