ಮಡಿಕೇರಿ, ಅ. 3: ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವತಿಯಿಂದ ಧನ ಸಹಾಯ ಸ್ವರೂಪ (ಪಿಬಿಎಸ್) ಮತ್ತು ಸಮೂಹ ಬ್ಯಾಂಕ್ ಸಾಲ (ಸಿಬಿಸಿ) ಯೋಜನೆ ಯಡಿ 1956 ರಿಂದ 2001-2002 ರವರೆಗೆ ಸಾಲ ಪಡೆದ ಫಲಾನುಭವಿಗಳು ಬಿ.ಪಿ.ಎಲ್. ಕಾರ್ಡ್ ಹೊಂದಿದ್ದಲ್ಲಿ ಹಾಗೂ ಸಾಲ ಪಡೆದ ಫಲಾನುಭವಿಗಳು ದೈವಾಧೀನರಾಗಿದ್ದಲ್ಲಿ ವಾರಸುದಾರರು ದಾಖಲಾತಿಗಳೊಂದಿಗೆ ಬಿ.ಪಿ.ಎಲ್. ಕಾರ್ಡ್‍ನ ನಕಲು ಪ್ರತಿಯನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಳಿಂದ ದೃಢೀಕರಿಸಿ ಪ್ರತಿಯನ್ನು ಎಂ.ಎ. ಶಾಂತಿ, ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ, ಕರ್ನಾಟಕ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿ, ಜಿಲ್ಲಾ ಕಚೇರಿ, ಜಿಲ್ಲಾ ಕೈಗಾರಿಕ ಕೇಂದ್ರದ ಕಟ್ಟಡ, ಕೊಹಿನೂರು ರಸ್ತೆ, ಮಡಿಕೇರಿ ಇವರ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ 08272-225946ನ್ನು ಸಂಪರ್ಕಿಸಬಹುದು.