*ಗೋಣಿಕೊಪ್ಪ, ಅ. 3: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಗೋಣಿಕೊಪ್ಪ ಪೊಲೀಸರು ಬಂಧಿಸಿದ್ದಾರೆ. ಎರಡನೇ ವಿಭಾಗದ ನಿವಾಸಿ ಕಿರಣ್ (26) ಆರೋಪಿಯಾಗಿದ್ದಾನೆ. ಕೂಲಿ ಕಾರ್ಮಿಕನಾಗಿರುವ ಈತ ಮಂಗಳವಾರ ಸಂಜೆ ಪಾಲಿಬೆಟ್ಟ ರಸ್ತೆ ತಿರುವಿನಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ. ಪೊಲೀಸರು ಖಚಿತ ಮಾಹಿತಿ ಮೇರೆ ಕಾರ್ಯಾಚರಣೆ ನಡೆಸಿ ಕಿರಣ್ ಬಳಿ ಇದ್ದ ಸುಮಾರು 187 ಗ್ರಾಂ. ಗಾಂಜಾವನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಗೋಣಿಕೊಪ್ಪ ವೃತ್ತ ನಿರೀಕ್ಷಕ ದಿವಾಕರ್ ನೇತೃತ್ವದಲ್ಲಿ ಉಪನಿರೀಕ್ಷಕ ಶ್ರೀಧರ್, ಸಿಬ್ಬಂದಿಗಳಾದ ಮೋಹನ್, ಶೇಖರ್, ಕುಶಾಲಪ್ಪ ಕಾರ್ಯಾಚರಣೆಯಲ್ಲಿ ಹಾಜರಿದ್ದರು.