ಸೋಮವಾರಪೇಟೆ, ಅ.3: ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಸಭೆ ಮತ್ತು ವಾರ್ಡ್ ಸಭೆಗಳು ತಾ. 5 ರಿಂದ 10ರವರೆಗೆ ನಡೆಯಲಿದೆ ಎಂದು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.

ಐಗೂರು- 1ರ ವಾರ್ಡ್ ಸಭೆ ತಾ. 5 ರಂದು ಪೂರ್ವಾಹ್ನ 10 ಗಂಟೆಗೆ ಐಗೂರಿನ ಹರಿಹರ ಯುವಕ ಸಂಘದ ಸಭಾಂಗಣದಲ್ಲಿ ಸದಸ್ಯ ಗೋಪಾಲಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಐಗೂರು-2ರ ವಾರ್ಡ್ ಸಭೆ ಅಪರಾಹ್ನ 2.30ಕ್ಕೆ ಹೊಸತೋಟದ ಅಂಗನವಾಡಿ ಕೇಂದ್ರದಲ್ಲಿ ಕೆ.ಪಿ. ಶೋಭ ಅವರ ಅಧ್ಯಕ್ಷತೆಯಲ್ಲಿ, ಯಡವಾರೆ ವಾರ್ಡ್ ಸಭೆ ತಾ. 6ರಂದು ಪೂರ್ವಾಹ್ನ 10.30ಕ್ಕೆ ಯಡವಾರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಾಂಚಾಲಿ ಅವರ ಅಧ್ಯಕ್ಷತೆಯಲ್ಲಿ, ಯಡವನಾಡು ವಾರ್ಡ್ ಸಭೆ ಅಪರಾಹ್ನ 2.30ಕ್ಕೆ ಅಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ, ಸದಸ್ಯೆ ಮಹೇಶ್ವರಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

2018-19ನೇ ಸಾಲಿನ ಗ್ರಾಮ ಸಭೆ ತಾ. 10ರಂದು ಪೂರ್ವಾಹ್ನ 10.30ಕ್ಕೆ ಯಡವನಾಡು ಸಹಿಪ್ರಾ ಶಾಲಾ ಸಭಾಂಗಣದಲ್ಲಿ ಅಧ್ಯಕ್ಷ ಡಿ.ಎಸ್. ಚಂಗಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಉಪಾಧ್ಯಕ್ಷೆ ಕೆ.ಪಿ. ಶೋಭ, ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್, ತಾ.ಪಂ. ಸದಸ್ಯೆ ಸಬಿತ ಚನ್ನಕೇಶವ, ಸಂಪನ್ಮೂಲ ವ್ಯಕ್ತಿಯಾಗಿ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಿ.ಆರ್. ಶಶಿಧರ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.