ಗೋಣಿಕೊಪ್ಪಲು, ಅ. 3: ಮೈಸೂರಿನ ಸಂತ ಫಿಲೋಮಿನಾಸ್ ಕಾಲೇಜಿನಲ್ಲಿ ಮಾಸ್ಟರ್ ಆಫ್ ಸೈನ್ಸ್ ಫಿಜಿಕ್ಸ್ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ ಗೋಣಿಕೊಪ್ಪಲುವಿನ ಅಶ್ವಿತ ಅಶೋಕ್ ಪುಲಿಗ ಅವರು ಚಿನ್ನದ ಪದಕ ಪಡೆದಿದ್ದಾರೆ. ಇತ್ತೀಚೆಗೆ ಮೈಸೂರಿನ ಫಿಲೋಮಿನಾ ಕಾಲೇಜಿನಲ್ಲಿ ನಡೆದ 4ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಅಶ್ವಿತ ಅಶೋಕ್ ಪುಲಿಗರವರ ಗೈರು ಹಾಜರಿಯಲ್ಲಿ ಇವರ ತಂದೆ ವಿಕ್ರಂ ಡೆಕೋರೇಟರ್ಸ್‍ನ ಮಾಲೀಕರಾದ ಅಶೋಕ್ ಹಾಗೂ ಅನಿತಾ ಪ್ರಶಸ್ತಿ ಸ್ವೀಕರಿಸಿದರು. ಪ್ರಸ್ತುತ ಅಶ್ವಿತರವರು ಬೆಂಗಳೂರಿನ ಕಂಪೆನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.