*ಗೋಣಿಕೊಪ್ಪ, ಅ. 3: ಅಕ್ರಮವಾಗಿ ಮದÀ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊನ್ನಂಪೇಟೆ ಪೊಲೀಸರು ಬಂಧಿಸಿದ್ದಾರೆ.

ಪೊನ್ನಂಪೇಟೆ ನಿವಾಸಿ ಅಪ್ಪಣ್ಣ (37) ಆರೋಪಿಯಾಗಿದ್ದು ಕಾನೂರು ಜಂಕ್ಷನ್ ಸೀತಾ ಕಾಲೋನಿ ಸಮೀಪದ ದಿನಸಿ ಅಂಗಡಿಯಲ್ಲಿ ಟೆಟ್ರಾಪ್ಯಾಕ್‍ನ ವಿಸ್ಕಿ ಹಾಗೂ ಇತರ ಮದ್ಯಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆ ಆರೋಪಿಯನ್ನು ಬಂಧಿಸಲಾಗಿದೆ.

ಈ ಸಂದರ್ಭ ವೃತ್ತ ನಿರೀಕ್ಷಕ ದಿವಾಕರ್ ಪೊನ್ನಂಪೇಟೆ ಠಾಣಾ ಉಪನಿರೀಕ್ಷಕ ಮಹೇಶ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.

*ಗುಜರಿ ಅಂಗಡಿಯಲ್ಲಿ ಅಕ್ರಮ ಮದÀ್ಯ ಮಾರಾಟದಲ್ಲಿ ತೊಡಗಿದ್ದ ರಮೇಶ್ (58) ಎಂಬ ವ್ಯಕ್ತಿಯನ್ನು ಗೋಣಿಕೊಪ್ಪ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪಾಲಿಬೆಟ್ಟ ರಸ್ತೆ ತಿರುವಿನ ಗೋಣಿಕೊಪ್ಪ ಗ್ರಾ.ಪಂ. ವ್ಯಾಪ್ತಿಯ ಕೊಪ್ಪ ಎಂಬಲ್ಲಿ ಗುಜರಿ ವ್ಯಾಪಾರದಲ್ಲಿ ತೊಡಗಿದ್ದ ರಮೇಶ್ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವೇಳೆ ಬಂಧಿಸಲಾಗಿದೆ. ಕಾರ್ಯಾಚರಣೆಯಲ್ಲಿ ಗೋಣಿಕೊಪ್ಪ ವೃತ್ತ ನಿರೀಕ್ಷಕ ದಿವಾಕರ್ ನೇತೃತ್ವದಲ್ಲಿ ಉಪನಿರೀಕ್ಷಕ ಶ್ರೀಧರ್, ಸಿಬ್ಬಂದಿಗಳಾದ ಮೋಹನ್, ಶೇಖರ್, ಕುಶಾಲಪ್ಪ ಕಾರ್ಯಾಚರಣೆಯಲ್ಲಿ ಹಾಜರಿದ್ದರು.