ಚೆಯ್ಯಂಡಾಣೆ, ಅ. 2: ಕೊಡಗು ಹವ್ಯಕ ಬ್ರಾಹ್ಮಣರ ಉತ್ತಮ ಜೀವನ ಸಹಕಾರ ಸಂಘದ ವೀರಾಜಪೇಟೆ ಘಟಕದ ವಾರ್ಷಿಕ ಮಹಾಸಭೆಯು ಸೆ. 30 ರಂದು ವೀರಾಜಪೇಟೆಯ ಚಿಕ್ಕಪೇಟೆ ಆಂಜನೇಯ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಹರಿಶಂಕರ ಪ್ರಸಾದ ಪಾಲಂಗಾಲ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಎನ್.ಎಸ್. ಉದಯ ಕುಮಾರ ವರದಿ ವಾಚಿಸಿದರೆ, ಕೆ.ಎಸ್. ನಾರಾಯಣಮೂರ್ತಿ ವಂದನಾ ರ್ಪಣೆ ನಡೆಸಿಕೊಟ್ಟರು. ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಹಾಜರಿದ್ದರು.