ಮಡಿಕೇರಿ, ಅ. 1: ದಸರಾ ಸಮೀಪಿಸುತ್ತಿರುವ ಹಿನ್ನೆಲೆ ನಗರವನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಂದು ವಾರ್ಡ್‍ಗೂ ತಲಾ ರೂ. 20 ಸಾವಿರ ಅನುದಾನ ಮೀಸಲಿಡುವಂತೆ ನಗರಸಭೆಯ ಸ್ಥಾಯಿ ಸಮಿತಿಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ನಗರಸಭೆ ಸಭಾಂಗಣದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಉಣ್ಣಿಕೃಷ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಸ್ಥಾಯಿ ಸಮಿತಿಯ ಸಭೆಯಲ್ಲಿ ಹಾಜರಾಗಿದ್ದ 6 ಮಂದಿ ಸದಸ್ಯರು ಕೂಡ ಸಭೆ ಆರಂಭವಾಗುತ್ತಿದ್ದಂತೆಯೇ ಸ್ವಚ್ಛತೆ ಹಾಗೂ ಯುಜಿಡಿ ಕಾಮಗಾರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸದಸ್ಯ ಪೀಟರ್, ನಗರಸಭೆಯಲ್ಲಿ ಯಾವದೇ ಕಾಮಗಾರಿಯಾಗುತ್ತಿಲ್ಲ. ನಗರದಲ್ಲಿ ಒಡಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಚರಂಡಿಗಳು ಮುಚ್ಚಿಹೋಗಿದೆ, ನಗರವನ್ನು ಸ್ವಚ್ಛಗೊಳಿಸಲು ಕಾರ್ಮಿಕರೇ ಇಲ್ಲ. ನಗರದ ಜನತೆ ಕತ್ತಲಲ್ಲಿ ಕಾಲ ಕಳೆಯುವಂತೆ ಆಗಿದೆ. ಇನ್ನೂ ಗುದ್ದಲ್ಲಿ ಹಿಡಿದು ನಾವೇ ಕೆಲಸ ಮಾಡುವ ಸ್ಥಿತಿ ಇದೆ ಎಂದು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದರು.ಮಡಿಕೇರಿ, ಅ. 1: ದಸರಾ ಸಮೀಪಿಸುತ್ತಿರುವ ಹಿನ್ನೆಲೆ ನಗರವನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಂದು ವಾರ್ಡ್‍ಗೂ ತಲಾ ರೂ. 20 ಸಾವಿರ ಅನುದಾನ ಮೀಸಲಿಡುವಂತೆ ನಗರಸಭೆಯ ಸ್ಥಾಯಿ ಸಮಿತಿಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ನಗರಸಭೆ ಸಭಾಂಗಣದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಉಣ್ಣಿಕೃಷ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಸ್ಥಾಯಿ ಸಮಿತಿಯ ಸಭೆಯಲ್ಲಿ ಹಾಜರಾಗಿದ್ದ 6 ಮಂದಿ ಸದಸ್ಯರು ಕೂಡ ಸಭೆ ಆರಂಭವಾಗುತ್ತಿದ್ದಂತೆಯೇ ಸ್ವಚ್ಛತೆ ಹಾಗೂ ಯುಜಿಡಿ ಕಾಮಗಾರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸದಸ್ಯ ಪೀಟರ್, ನಗರಸಭೆಯಲ್ಲಿ ಯಾವದೇ ಕಾಮಗಾರಿಯಾಗುತ್ತಿಲ್ಲ. ನಗರದಲ್ಲಿ ಒಡಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಚರಂಡಿಗಳು ಮುಚ್ಚಿಹೋಗಿದೆ, ನಗರವನ್ನು ಸ್ವಚ್ಛಗೊಳಿಸಲು ಕಾರ್ಮಿಕರೇ ಇಲ್ಲ. ನಗರದ ಜನತೆ ಕತ್ತಲಲ್ಲಿ ಕಾಲ ಕಳೆಯುವಂತೆ ಆಗಿದೆ. ಇನ್ನೂ ಗುದ್ದಲ್ಲಿ ಹಿಡಿದು ನಾವೇ ಕೆಲಸ ಮಾಡುವ ಸ್ಥಿತಿ ಇದೆ ಎಂದು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದರು.

ಮಾತನಾಡಿ, ನೌಕರರು ಇಲ್ಲದೇ ಇರುವ ಕಾರಣ ಸಮಸ್ಯೆ ಉಂಟಾಗುತ್ತಿದೆ. 30 ಮಂದಿ ಹೆಚ್ಚು ನೌಕರರನ್ನು ಪಡೆದುಕೊಳ್ಳಲು ಈಗಾಗಲೇ ಸರಕಾರ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಈಗಾಗಲೇ ಹೆಚ್ಚುವರಿ ಸಿಬ್ಬಂದಿಗಳಿಗಾಗಿ ಪ್ರಸ್ತಾವನೆ ಸಲ್ಲಿಸ ಲಾಗಿದೆ. ಸಿಬ್ಬಂದಿಗಳು ನೇಮಕವಾದ ಕೂಡಲೇ ಕೆಲಸ ಆರಂಭಿಸುವದಾಗಿ ಹೇಳಿದರು. ಪ್ರತಿಕ್ರಿಯಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಉಣ್ಣಿಕೃಷ್ಣ ದಸರಾ ಆರಂಭವಾಗುವದಕ್ಕೂ ಮುನ್ನ ಸ್ವಚ್ಛತೆ ಪೂರ್ಣಗೊಳ್ಳಬೇಕು. ಆದರಿಂದ ನಗರಸಭೆಯೇ ಶೀಘ್ರವಾಗಿ ಈ ಕುರಿತು ತೀರ್ಮಾನಿಸಬೇಕು ಎಂದು ಆಗ್ರಹಿಸಿದರು.

ಅಂತಿಮವಾಗಿ ಮೂರು ವಾರ್ಡ್‍ಗೆ ಒಬ್ಬ ಗುತ್ತಿಗೆದಾರನನ್ನು ನೇಮಿಸಿ, ಪ್ರತಿ ವಾರ್ಡ್‍ಗೂ ರೂ. 20 ಸಾವಿರ ಅನುದಾನ ನೀಡುವದು. ಈ ಹಣದಲ್ಲಿ ಚರಂಡಿ ದುರಸ್ತಿ ಹಾಗೂ ಕಾಡು ಕಾಡಿದು ಸ್ವಚ್ಛಗೊಳಿಸುವದು, ಹಾಗೂ ಆ ಆಯಾ ವಾರ್ಡ್‍ನ ಉಸ್ತುವಾರಿಯನ್ನು ಆಯಾ ವಾರ್ಡ್‍ನ ಜವಾಬ್ದಾರಿಯನ್ನು ವಾರ್ಡ್‍ನ ಸದಸ್ಯರೇ ವಹಿಸಿಕೊಳ್ಳುವಂತೆ ತೀರ್ಮಾನ ಕೈಗೊಳ್ಳಲಾಯಿತು.

ಯುಜಿಡಿ ಕಾಮಗಾರಿಯ ಬಗ್ಗೆ ಸದಸ್ಯರೆಲ್ಲ ಆಕ್ಷೇಪ ವ್ಯಕ್ತಪಡಿಸಿದರು. ಕಾಮಗಾರಿಯ ಗುಣಮಟ್ಟ ತೀರಾ ಕಳಪೆಯಾಗಿದೆ. ಉತ್ತಮ ಥಾರ್ ಬಳಕೆಯಾಗುತ್ತಿಲ್ಲ. ಚೇಂಬರ್‍ನ್ನು ರಸ್ತೆಯ ಮೇಲೆಯೇ ಅಳವಡಿಸಲಾಗಿದೆ ಎಂದು ಸದಸ್ಯರು ಇಂಜಿನಿಯರು ಗಳನ್ನು ತರಾಟೆಗೆ ತೆಗೆದುಕೊಂಡರು. ಶೀಘ್ರದಲ್ಲಿಯೇ ಯುಜಿಡಿಯಿಂದ ಹದಗೆಟ್ಟ ರಸ್ತೆಯನ್ನು ದುರಸ್ತಿ ಗೊಳಿಸುವಂತೆ ಸೂಚಿಸಲಾಯಿತು.

ಉಪಾಧ್ಯಕ್ಷ ಟಿ.ಎಸ್ ಪ್ರಕಾಶ್, ಪೌರಯುಕ್ತ ರಮೇಶ್, ನಗರಸಭೆಯ ಅಧಿಕಾರಿಗಳು ಹಾಗೂ ಸದಸ್ಯರು ಇದ್ದರು.