ನಾಪೆÇೀಕ್ಲು, ಅ. 2: ಕೊಡಗು ಜಿಲ್ಲೆಯಲ್ಲಿ ಹಿಂದೆಂದೂ ಕೇಳರಿಯದ ಜಲಪ್ರಳಯ, ಪ್ರಕೃತಿ ವಿಕೋಪ ಸಂಭವಿಸಿದೆ. ಜಿಲ್ಲೆಯ ಮಕ್ಕಂದೂರು, ಕಾಲೂರು, ಮುಕ್ಕೋಡ್ಲು, ಹೆಮ್ಮೆತ್ತಾಳು, ಮೇಘತ್ತಾಳು, ಹಟ್ಟಿಹೊಳೆ, ಕಾಟಕೇರಿ, ಕಾಂಡನಕೊಲ್ಲಿ, ಮೊಣ್ಣಂಗೇರಿ, ಜೋಡುಪಾಲ, ಹಮ್ಮಿಯಾಲ, ಮುಂತಾದ ಗ್ರಾಮಗಳು ಕಾಲರುದ್ರನ ನರ್ತನಕ್ಕೆ ಸಿಲುಕಿ ಧ್ವಂಸಗೊಂಡಿವೆ. ಪ್ರಕೃತಿ ವಿಕೋಪದಲ್ಲಿ ನೊಂದ ಜನರಿಗೆ ಜಿಲ್ಲಾಡಳಿತ, ಸರಕಾರ ಸಂಪೂರ್ಣ ವಾಗಿ ಸಹಕರಿಸುತ್ತಿದೆ. ಅದರೊಂದಿಗೆ ಜಿಲ್ಲೆಯ, ರಾಜ್ಯದ ವಿವಿಧ ಸಂಘ ಸಂಸ್ಥೆಗಳು ಜಾತಿ, ಬೇಧ, ಧರ್ಮ, ಪಕ್ಷ ಮರೆತು ಕಷ್ಟದಲ್ಲಿ ನಾವೆಲ್ಲ ಒಂದೆ ಎಂಬ ಧ್ಯೇಯವನ್ನು ಪ್ರದರ್ಶಿಸುತ್ತಿದೆ. ಆದರೆ ಬೆರಳೆಣಿಕೆಯ ಜನ ಈ ದುರಂತದ ಸದುಪಯೋಗ ಪಡೆದು ಕೊಳ್ಳುವದರ ಮೂಲಕ ಜಿಲ್ಲೆಗೆ, ಜಿಲ್ಲೆಯ ಜನತೆಗೆ ಕಪ್ಪು ಮಸಿ ಬಳಿಯಲು ಯತ್ನಿಸುತ್ತಿರುವ ಘಟನೆಗಳೂ ಕಂಡು ಬರುತ್ತಿದೆ.
ಆದರೆ ಇತ್ತೀಚಿನ ದಿನಗಳಲ್ಲಿ ಮಳೆ ಕಡಿಮೆಗೊಂಡ ಹಿನ್ನೆಲೆಯಲ್ಲಿ ಜಿಲ್ಲೆಯ, ಹೊರ ಜಿಲ್ಲೆಯ ಸಂಘ ಸಂಸ್ಥೆಗಳೊಂದಿಗೆ ಶಾಲಾ - ಕಾಲೇಜು ವಿದ್ಯಾರ್ಥಿಗಳು ಕೂಡ ದುರಂತ ಸ್ಥಳಗಳಿಗೆ ಭೇಟಿ ನೀಡಿ ನೊಂದವರಿಗೆ ಸಹಕಾರ ನೀಡುತ್ತಿದ್ದಾರೆ. ಮೂರ್ನಾಡು ವಿದ್ಯಾಸಂಸ್ಥೆಯ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ಎನ್.ಸಿ.ಸಿ ಮತ್ತು ಎನ್.ಎಸ್.ಎಸ್ ಘಟಕದ ವಿದ್ಯಾರ್ಥಿ ಗಳು ಮುಕ್ಕೋಡ್ಲು ಗ್ರಾಮಕ್ಕೆ ತೆರಳಿ ಶ್ರಮದಾನ ಕೈಗೊಂಡರು.
ಗ್ರಾಮದ ಶಾಂತೆಯಂಡ ಉತ್ತಯ್ಯ ಅವರ ಮನೆ ಪ್ರಕೃತಿ ವಿಕೋಪದಿಂದ ಸಂಪೂರ್ಣವಾಗಿ ನಾಶಗೊಂಡಿದೆ. ವಿದ್ಯಾರ್ಥಿಗಳು ಈ ಮನೆಯಲ್ಲಿದ್ದ ಉಪಯುಕ್ತ ಸಾಮಗ್ರಿಗಳನ್ನು ಸಂರಕ್ಷಣೆ ಮಾಡುವ ಉದ್ದೇಶದಿಂದ ಅವುಗಳೆಲ್ಲವನ್ನು ವಾಹನ ಸಂಚರಿಸುವ ಸ್ಥಳದವರೆಗೂ ಸಾಗಿಸಿ ಸಹಕರಿಸಿದರು.
ಇವರೊಂದಿಗೆ ನಾಪೆÇೀಕ್ಲು ಕೊಡವ ಸಮಾಜದ ಪೆÇಮ್ಮಕ್ಕಡ ಒಕ್ಕೂಟದ ಅಧ್ಯಕ್ಷೆ ಮೂವೆರ ರೇಖಾ ಪ್ರಕಾಶ್, ಪದಾಧಿಕಾರಿಗಳು, ಚೆಪ್ಪುಡಿರ ರತನ್ ಪೆÇನ್ನಪ್ಪ, ಕಾಳಚಂಡ ದಿಲೀಪ್ ದೇವಯ್ಯ, ಬಲ್ಲಡಿಚಂಡ ಮುರಳಿ, ಮೂರ್ನಾಡು ವಿದ್ಯಾಸಂಸ್ಥೆಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಎ.ಕೆ.ದೇವಕಿ, ಎನ್.ಸಿ.ಸಿ ಅಧಿಕಾರಿ ಗಳಾದ ಕಾವೇರಪ್ಪ, ಗಣೇಶ್, ಎನ್.ಎಸ್.ಎಸ್ ಯೋಜನಾಧಿಕಾರಿ ಮಾಲತಿ ಮತ್ತು ಉಪನ್ಯಾಸಕ ವೃಂದ ಸಹಕರಿಸಿದರು.