ಮಡಿಕೇರಿ, ಅ. 1: ಮಡಿಕೇರಿ ರೋಟರಿ ಕ್ಲಬ್‍ವತಿಯಿಂದ ಮೂವರು ಶಿಕ್ಷಕರಿಗೆ ನ್ಯಾಷನ್ ಬಿಲ್ಡರ್ಸ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನಗರದ ರೋಟರಿ ಸಭಾಂಗಣದಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಸಂತ ಮೈಕಲರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಕೆ.ಕೆ. ಪ್ರೇಮಲತಾ, ಹಾಕತ್ತೂರು ಸರ್ಕಾರಿ ಪ್ರೌಡಶಾಲೆ ಶಿಕ್ಷಕ ಸಿ.ಎಂ. ಮುನೀರ್, ಮಕ್ಕಂದೂರು ಸರ್ಕಾರಿ ಪ್ರೌಡಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಸಿ.ಕೆ. ಉಷಾ ಅವರನ್ನು ನ್ಯಾಷನ್ ಬಿಲ್ಡರ್ಸ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ರೋಟರಿ ಅಧ್ಯಕ್ಷ ನಿವೃತ್ತ ಮೇಜರ್ ಓ.ಎಸ್. ಚಿಂಗಪ್ಪ, ಕಾರ್ಯದರ್ಶಿ ಮೃಣಾಲಿನಿ ಚಿಣ್ಣಪ್ಪ, ಮಾಜಿ ಗವರ್ನರ್ ಮಾತಂಡ ಸುರೇಶ್ ಚಂಗಪ್ಪ, ಹಿರಿಯ ರೋಟರಿ ಸದಸ್ಯ ಡಾ. ಎಂ.ಜಿ. ಪಾಟ್ಕರ್, ಅನಂತಸುಬ್ಬರಾವ್, ಕಾರ್ಯಪ್ಪ ಸೇರಿದಂತೆ ಪ್ರಮುಖರು ಹಾಜರಿದ್ದರು.