ವೀರಾಜಪೇಟೆ, ಅ. 2: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150 ನೇ ಜಯಂತಿಯ ಅಂಗವಾಗಿ ತಾಲೂಕು ಆಡಳಿತದಿಂದ ವೀರಾಜಪೇಟೆ ಮಿನಿ ವಿಧಾನ ಸೌಧದ ತಾಲೂಕು ಕಚೇರಿ ಸಭಾಂಗಣದಲ್ಲಿ ತಹಶೀಲ್ದಾರ್ ಆರ್.ಗೋವಿಂದರಾಜು ಗಾಂಧಿಜಯಂತಿ ಅಂಗವಾಗಿ ಮಹಾತ್ಮಗಾಂಧೀಜಿ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಶಿರಸ್ತೇದಾರರಾದ ಪ್ರವೀಣ್ ಕುಮಾರ್, ಕೆ.ಎಂ. ಚಿಣ್ಣಪ್ಪ, ಕಂದಾಯ ಪರಿವೀಕ್ಷಕರಾದ ಪಳಂಗಪ್ಪ, ಸರ್ವೇ ಅಧಿಕಾರಿ ಶಿವಾನಂದ, ಹಾಗೂ ತಾಲೂಕು ಕಚೇರಿ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.