ಶನಿವಾರಸಂತೆ, ಅ. 2: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಳೆದ ರಾತ್ರಿ 10 ಗಂಟೆಗೆ ಗಡಿಭಾಗ ಚಂಗಡಹಳ್ಳಿ ಬಳಿಯ ಗೋನಳ್ಳಿ ಗ್ರಾಮದ ಕೂಲಿ ಕಾರ್ಮಿಕ ದಂಪತಿಗೆ ವಿಚಿತ್ರ ಮಗುವೊಂದು ಜನಿಸಿದೆ.

ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದ ಕಾರಣ ದಾದಿ ಗೀತಾ ಹೆರಿಗೆ ಮಾಡಿಸಿದ್ದರು. ವಿಚಿತ್ರ ಮಗು ಜನಿಸಿದಾಗಲೇ ಮರಣಿಸಿತ್ತು. ಮಗುವಿಗೆ ಜನನೇಂದ್ರಿಯ ಇರಲಿಲ್ಲ. 10 ಬೆರಳುಗಳ ಒಂದೇ ಕಾಲು, 6 ಇಂಚಿನ ಬಾಲವಿತ್ತು.

ದುಃಖತಪ್ತ ತಂದೆ-ತಾಯಿ ಆರೋಗ್ಯ ಕೇಂದ್ರದ ಸಮೀಪದ ಜಾಗದಲ್ಲೇ ಮೃತ ಮಗುವಿನ ದೇಹದ ಅಂತ್ಯ ಸಂಸ್ಕಾರ ನೆರವೇರಿಸಿದರು.