ಮಡಿಕೇರಿ, ಅ. 2: 64ನೇ ವಜ್ಯಜೀವಿ ಸಪ್ತಾಹ ಅಂಗವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅರಣ್ಯ ವನ್ಯಜೀವಿ ಮತ್ತು ಜೀವ ವೈವಿಧ್ಯತೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಕೊಡಗಿನ ಮೂರು ತಾಲೂಕು ಮಟ್ಟದ ಸ್ಪರ್ಧೆಗಳನ್ನು ಪ್ರತ್ಯೇಕವಾಗಿ ತಾ. 5 ರಂದು ಆಯೋಜಿಸಲಾಗಿದೆ.

ಪ್ರಬಂಧ ಸ್ಪರ್ಧೆಯು ಬೆಳಿಗ್ಗೆ 10.30 ರಿಂದ 11.30 ರವರೆಗೆ ನಡೆಯಲಿದೆ. ಪ್ರೌಢಶಾಲೆ ವಿಭಾಗಕ್ಕೆ ‘ಪರಿಸರ ಸಮತೋಲನದಲ್ಲಿ ವನ್ಯಜೀವಿಗಳ ಪಾತ್ರ’ ಹಾಗೂ ಪಿ.ಯು.ಸಿ. ವಿಭಾಗಕ್ಕೆ ‘ಮಾನವ ಮತ್ತು ವನ್ಯಪ್ರಾಣಿ ಸಂಘರ್ಷ ನಿಯಂತ್ರಿಸಲು ಸ್ಥಳೀಯರ ಪಾತ್ರ’. ಚಿತ್ರಕಲೆ ಸ್ಪರ್ಧೆಯು ಮಧ್ಯಾಹ್ನ 12 ರಿಂದ 1 ರವರೆಗೆ. ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗೆ ‘ಪ್ರಕೃತಿ ಮತ್ತು ವನ್ಯಜೀವಿ’ ಕುರಿತು ಸ್ಪರ್ಧೆ ಏರ್ಪಡಿಸಲಾಗಿದೆ.