ವೀರಾಜಪೇಟೆ, ಅ. 2: ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಅಭಿವೃದ್ಧಿ ಗೊಳಿಸುವ ಸಂದರ್ಭ ರಸ್ತೆ ಬದಿಯ ತೋಟದ ಮಾಲಿಕರು ರಸ್ತೆಗೆ ಇರುವ ಜಾಗವನ್ನು ಬಿಟ್ಟು ಕೊಡುವ ಮೂಲಕ ರಸ್ತೆ ಅಭಿವೃದ್ಧಿಗೆ ಸಹಕಾರ ನೀಡು ವಂತಾಗಬೇಕು ಎಂದು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು. ಚೆಂಬೆಬೆಳ್ಳೂರು ಗ್ರಾ.ಪಂ. ವ್ಯಾಪ್ತಿಯಿಂದ ಒಂಟಿಯಂಗಡಿವರೆಗೆ ರಸ್ತೆ ಅಗಲೀಕರಣ ಮತ್ತು ಡಾಂಬರೀಕರಣ. ಆಯವ್ಯಯ ಅಪೆಂಡಿಕ್ಸ್ ಇ. ಯೋಜನೆಯ ಅಡಿಯಲ್ಲಿ ರೂ. ಎರಡೂವರೆ ಕೋಟಿ ಕಾಮಗಾರಿಗೆ ಚೆಂಬೆಬೆಳ್ಳೂರಿನಲ್ಲಿ ಭೂಮಿ ಪೂಜೆ ನೆರವೇರಿಸಿದ ಅವರು, ಇತ್ತೀಚಿನ ದಿನಗಳಲ್ಲಿ ಜನಸಂಖ್ಯೆ ಮತ್ತು ವಾಹನಗಳು ಹೆಚ್ಚುತ್ತಿರುವದರಿಂದ ರಸ್ತೆಗಳ ಅಗಲೀಕರಣ ಆಗಬೇಕಾಗಿದೆ. ಆಯ್ದ ಎಲ್ಲ ಕಾಲೋನಿಗಳಿಗೂ ಕಾಂಕ್ರಿಟ್ ರಸ್ತೆಗಳನ್ನು ನಿರ್ಮಿಸಲಾಗು ವದು. ಗ್ರಾಮಗಳು ಅಭಿವೃದ್ಧಿ ಹೊಂದಲು ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಸರಕಾರದ ಅನುದಾನದಲ್ಲಿ ಕಾಮಗಾರಿಗಳು ನಡೆಯುವ ಸಂದರ್ಭ ಕಳಪೆ ಕಾಮಗಾರಿಯಾಗದಂತೆ ಗ್ರಾವiಸ್ತರು ಎಚ್ಚರವಹಿಸಬೇಕು ಎಂದರು.
ಜಿ.ಪಂ. ಸದಸ್ಯ ಮೂಕೊಂಡ ಶಶಿ ಸುಬ್ರಮಣಿ ಮಾತನಾಡಿ ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಈಶ್ವರ ಕಾಲೋನಿಗೆ 8 ಲಕ್ಷದಲ್ಲಿ ಕಾಂಕ್ರಿಟ್ ರಸ್ತೆ, ಚೀರಣಾ ಕಾಲೋನಿಗೆ ರೂ,10 ಲಕ್ಷದ ಕಾಂಕ್ರಿಟ್ ರಸ್ತೆ ನಿರ್ಮಾಣ, ಪೊದಕಾಡು ಕಾಲೋನಿಗೆ 10ಲಕ್ಷದ ಕಾಂಕ್ರೀಟ್ ರಸ್ತೆ, ಬೊಳ್ಳರಿಮಾಡು ಕಾಲೋನಿಗೆ ರೂ,10 ಲಕ್ಷದ ಕಾಂಕ್ರೀಟ್ ರಸ್ತೆ ಕಾಮಗಾರಿ, ಹಾಗೂ ಕದನೂರು ಗ್ರಾ.ಪಂ. ವ್ಯಾಪ್ತಿಯ ಅರಮೇರಿ ಪನ್ನಂಗಾಲ ದೇವಸ್ಥಾನದ ಬಳಿಯ ಕಾಲೋನಿಗೆ ಕಾಕ್ರಿಟ್ ರಸ್ತೆ ಕಾಮಗಾರಿಗೆ ರೂ,10 ಲಕ್ಷ, ಮತ್ತು ಬಿಳುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಕೇರಿ ಹರಿಜನ ಕಾಲೋನಿಗೆ ರೂ. 12 ಲಕ್ಷದ ಕಾಂಕ್ರಿಟ್ ರಸ್ತೆ, ಮಗ್ಗುಲ ಕಾಲೋನಿಗೆ 8 ಲಕ್ಷದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಸಲಾಗುವದು ಎಂದು ಹೇಳಿದರು.
ಭೂಮಿ ಪೂಜೆ ಸಂದರ್ಭ ತಾಲೂಕು ಪಂಚಾಯಿತಿ ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್, ಕಣ್ಣಂಗಾಲ ಗ್ರಾ.ಪಂ. ಸದಸ್ಯ ನಿತೀನ್, ಚೆಂಬೆಬೆಳ್ಳೂರು ದೇವಾಲಯದ ಅಧ್ಯಕ್ಷ ಬಾನು ಬೋಪಣ್ಣ, ಗ್ರಾಮಸ್ಥರಾದ ರಂಜಿ, ಸಿ. ಬೆಳ್ಯಪ್ಪ, ಮುದ್ದಪ್ಪ, ಕೆ. ಸುರೇಶ್, ಪೂಣಚ್ಚ, ಬನ್ಸಿ, ಮೂಕೊಂಡ ವಿಜು, ಸೋಮೆಯಂಡ ರಘು ದೇವಯ್ಯ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ಪಾಲಕ ಅಭಿಯಂತರ ಸುರೇಶ್ ಮತ್ತು ನವೀನ್ ಅವರುಗಳು ಉಪಸ್ಥಿತರಿದ್ದರು.