ಮಡಿಕೇರಿ, ಅ.2: ಕಾಲೇಜಿನ ಅಂಗಳವನ್ನು ಶುಚಿಮಾಡಿದ್ದÀಲ್ಲದೆ, ಮಡಿಕೇರಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಹಾಗೂ ಶಿಕ್ಷಕ ವೃಂದದವರು ಉತ್ಸಾಹದಿಂದ ಸರಳ ರೀತಿಯಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿಯನ್ನು ಆಚರಿಸಿದರು. ಮಹಾತ್ಮ ಗಾಂಧೀಜಿ ಸಂಯೋಜಿತ ‘ರಘುಪತಿ ರಾಘವ ರಾಜಾರಾಮ್’ನ ಪ್ರಾರ್ಥನೆಯನ್ನು ಕಾಲೇಜಿನ ವಿದ್ಯಾರ್ಥಿಗಳು ಮಧುರವಾಗಿ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಗಳಿಗೆ ಹಾರಾರ್ಪಣೆ ಮಾಡುವ ಕಾರ್ಯಕ್ರಮ ಅತಿಥಿüಗಳಿಂದ ನೆರವೇರಿತು. ಗಾಂಧೀಜಿಯವರ ಸದ್ಗುಣಗಳನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ, ಗಾಂಧಿಯವರ ಜಾತ್ಯತೀತ ಮನೋಭಾವವನ್ನು ಸಾರುವ ಸಲುವಾಗಿ ಕಾಲೇಜಿನ ವಿದ್ಯಾರ್ಥಿಗಳು ಭಗವದ್ಗೀತೆ, ಬೈಬಲ್ ಮಡಿಕೇರಿ, ಅ.2: ಕಾಲೇಜಿನ ಅಂಗಳವನ್ನು ಶುಚಿಮಾಡಿದ್ದÀಲ್ಲದೆ, ಮಡಿಕೇರಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಹಾಗೂ ಶಿಕ್ಷಕ ವೃಂದದವರು ಉತ್ಸಾಹದಿಂದ ಸರಳ ರೀತಿಯಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿಯನ್ನು ಆಚರಿಸಿದರು. ಮಹಾತ್ಮ ಗಾಂಧೀಜಿ ಸಂಯೋಜಿತ ‘ರಘುಪತಿ ರಾಘವ ರಾಜಾರಾಮ್’ನ ಪ್ರಾರ್ಥನೆಯನ್ನು ಕಾಲೇಜಿನ ವಿದ್ಯಾರ್ಥಿಗಳು ಮಧುರವಾಗಿ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಗಳಿಗೆ ಹಾರಾರ್ಪಣೆ ಮಾಡುವ ಕಾರ್ಯಕ್ರಮ ಅತಿಥಿüಗಳಿಂದ ನೆರವೇರಿತು. ಗಾಂಧೀಜಿಯವರ ಸದ್ಗುಣಗಳನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ, ಗಾಂಧಿಯವರ ಜಾತ್ಯತೀತ ಮನೋಭಾವವನ್ನು ಸಾರುವ ಸಲುವಾಗಿ ಕಾಲೇಜಿನ ವಿದ್ಯಾರ್ಥಿಗಳು ಭಗವದ್ಗೀತೆ, ಬೈಬಲ್ ಗಾಳಿಬೀಡು ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಕಾಲೇಜಿನ ಅಧ್ಯಕ್ಷರಾದ ಧನಂಜಯ ಅವರು ನಾಯಕರ ಪ್ರಮಾಣ ವಚನವನ್ನು ವಿದ್ಯಾರ್ಥಿಗಳಿಗೆ ಬೋಧಿಸಿದರು. ಅಲ್ಲದೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನೂ ವಹಿಸಿದ್ದ ಧನಂಜಯ ಅವರು ಗಾಂಧಿ ಹಾಗೂ ಶಾಸ್ತ್ರಿಯವರ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರ ಸಿದ್ದಾಂತಗಳನ್ನು ಬೆಳೆಸಬೇಕೆಂದು ವಿದ್ಯಾರ್ಥಿಗಳಿಗೆ ಕರೆಯಿತ್ತರು. ಕಾಲೇಜಿನ ಪಾಂಶುಪಾಲ ವಿಜಯ್ ಅÀವರು ದೇಶ, ವಿದೇಶಗಳ ನಾಯಕರಿಂದ ಸ್ಫ್ಪೂರ್ತಿ ಪಡೆದು ವಿದ್ಯಾರ್ಥಿಗಳು ಉನ್ನತ ಮಟ್ಟಕ್ಕೆ ಏರಬೇಕೆಂದು ನುಡಿದರು. ಬರಿ ಓದು ಮಾತ್ರವಲ್ಲದೆ ಕ್ರೀಡೆ ಹಾಗೂ ಇತರ ಪಠ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ವ್ಯಕ್ತಿತ್ವ ಬೆಳೆಸಿಕೊಳ್ಳ ಬೇಕೆಂದು ಕಾರ್ಯಕ್ರಮದಲ್ಲಿ ಉಪಸ್ಥಿತಿಹೊಂದಿದ್ದ ‘ಶಕ್ತಿ’ಯ ವ್ಯವಸ್ಥಾಪಕಿ ಹಾಗೂ ಇಂಡಿಯನ್ ಎಕ್ಸ್‍ಪ್ರೆಸ್ ಪತ್ರಿಕೆಯ ವರದಿಗಾರರಾದ ಪ್ರಜ್ಞಾ ಜಿ.ಆರ್ ಹೇಳಿದರು. ಕಾಲೇಜಿನ ಶಿಕ್ಷಕ ನಂದೀಶ್ ಕಾರ್ಯಕ್ರಮ ನಿರೂಪಿಸಿದರು.