ಸೋಮವಾರಪೇಟೆ,ಸೆ.30: ಸಮೀಪದ ಅಬ್ಬೂರುಕಟ್ಟೆ-ಅರೆಯೂರು ಗ್ರಾಮದ ಕಾಫಿ ತೋಟದಲ್ಲಿದ್ದ ಹೆಬ್ಬಾವನ್ನು ಸೋಮವಾರಪೇಟೆಯ ಸ್ನೇಕ್ ರಘು ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ.

ಅರೆಯೂರು ಗ್ರಾಮದ ವಿ.ಎಲ್. ದರ್ಶನ್ ಅವರ ಕಾಫಿ ತೋಟದಲ್ಲಿ ಕಾಣಿಸಿಕೊಂಡ ಹೆಬ್ಬಾವು ಗ್ರಾಮಸ್ಥರಲ್ಲಿ ಭಯವನ್ನು ಮೂಡಿಸಿತ್ತು. ಇದನ್ನು ಸೆರೆಹಿಡಿದ ರಘು ನಂತರ ಅರಣ್ಯಕ್ಕೆ ಬಿಟ್ಟರು.